Advertisement

BJP ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ನಾರಾಯಣಸಾ ಬಾಂಡಗೆಗೆ ಅವಕಾಶ

09:37 PM Feb 11, 2024 | Team Udayavani |

ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿ ನಡೆಯುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ರವಿವಾರ ಅಭ್ಯರ್ಥಿಗಳನ್ನು ಘೋಷಿಸಿದ್ದು ಕರ್ನಾಟಕದಿಂದ ಬಿಜೆಪಿ ಕೇಂದ್ರೀಯ ಚುನಾವಣ ಸಮಿತಿ ನಾರಾಯಣಸಾ  ಕೃಷ್ಣಸಾ ಬಾಂಡಗೆ ಅವರ ಹೆಸರನ್ನು ಪ್ರಕಟಿಸಿದೆ.

Advertisement

ಬಿಹಾರದ ಎರಡು ಸ್ಥಾನಗಳಿಗೆ ಧರ್ಮಶೀಲಾ ಗುಪ್ತ ಮತ್ತು ಡಾ. ಭೀಮ್ ಸಿಂಗ್ , ಛತ್ತೀಸಗಡಕ್ಕೆ ರಾಜಾ ದೇವೇಂದ್ರ ಪ್ರತಾಪ್ ಸಿಂಗ್, ಹರ್ಯಾಣದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಸುಭಾಶ್ ಬರಲಾ ಅವರನ್ನು ಅಭ್ಯರ್ಥಿಗಳನ್ನಾಗಿ ಪ್ರಕಟಿಸಲಾಗಿದೆ.

ಉತ್ತರ ಪ್ರದೇಶದ ಏಳು ಸ್ಥಾನಗಳಿಗೆ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಆರ್‌.ಪಿ. ಎನ್ ಸಿಂಗ್, ಡಾ. ಸುಧಾಂಶು ತ್ರಿವೇದಿ, ಚೌಧರಿ ತೇಜವೀರ್ ಸಿಂಗ್, ಸಾಧನಾ ಸಿಂಗ್, ಅಮರಪಾಲ್ ಮೌರ್ಯ, ಡಾ. ಸಂಗೀತಾ ಬಲವಂತ್ ಮತ್ತು ನವೀನ್ ಜೈನ್ ಅಭ್ಯರ್ಥಿಗಳಾಗಿದ್ದಾರೆ. ಉತ್ತರಾಖಂಡ್ ನಲ್ಲಿ ಮಹೇಂದ್ರ ಭಟ್ ಮತ್ತು ಪಶ್ಚಿಮ ಬಂಗಾಳದಿಂದ ಸಮಿಕ್ ಭಟ್ಟಾಚಾರ್ಯ ಅವರು ಕಣಕ್ಕಿಳಿಯಲಿದ್ದಾರೆ.

ಬಾಗಲಕೋಟೆ ಜಿಲ್ಲೆಯವರಾದ ಬಾಂಡಗೆ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next