ಕೋಲ್ಕತಾ: ಪಶ್ಚಿಮ ಬಂಗಾಲದ ಜಾಧವ್‌ಪುರ ವಿವಿಯಲ್ಲಿ ವಿದ್ಯಾರ್ಥಿಗಳು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಘಟನೆ ಖಂಡಿಸಿ ಶುಕ್ರವಾರ ಬಿಜೆಪಿ ಹಾಗೂ ಎಸ್‌ಎಫ್ಐ ಕೋಲ್ಕತಾದಲ್ಲಿ ಪ್ರತ್ಯೇಕ ಪ್ರತಿಭಟನ ಮೆರವಣಿಗೆಗಳನ್ನು ನಡೆಸಿ ಪರಸ್ಪರರ ವಿರುದ್ಧ ಘೋಷಣೆ ಕೂಗಿವೆ.
ಬಿಜೆಪಿ ಹಿರಿಯ ನಾಯಕರಾದ ಸಯಾಂತನ್ ಬಸು ಹಾಗೂ ರಾಜು ಬ್ಯಾನರ್ಜಿ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಿಂದ ಕೇಂದ್ರ ಕೋಲ್ಕತಾವರೆಗೆ ಪ್ರತಿಭಟನ ರ್ಯಾಲಿ ನಡೆಸಲಾಗಿದೆ. ದಾಳಿಕೋರರ ವಿರುದ್ಧ ಕೂಡಲೇ ಸೂಕ್ತ ಕ್ರಮ ಜರಗಿಸುವಂತೆ ಪ್ರತಿಭಟನಕಾರರು ಆಗ್ರಹಿಸಿ ದ್ದಾರೆ. ಇದೇ ವೇಳೆ, ಬಾಬುಲ್ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಫೋಟೋ ವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ದಾಳಿಕೋರರನ್ನು ಬಂಧಿಸಿ ಎಂದು ಸಿಎಂ ಮಮತಾಗೆ ಸವಾಲೆಸೆದಿದ್ದಾರೆ.
ಗುರುವಾರ ವಿವಿಯಲ್ಲಿ ಎಬಿವಿಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಸುಪ್ರಿಯೋ ಆಗಮಿಸಿದ್ದರು. ಆಗ ಎಡಪಂಥೀಯ ಸಂಘಟ ನೆಗಳಿಗೆ ಸೇರಿದ್ದ ವಿದ್ಯಾರ್ಥಿಗಳು ಕಪ್ಪುಧ್ವಜ ಪ್ರದರ್ಶಿ ಸಿದ್ದಲ್ಲದೆ, ಸುಪ್ರಿಯೋರ ಬಟ್ಟೆ ಎಳೆದಾಡಿ ಹಲ್ಲೆ ನಡೆಸಿದ್ದರು. ಕೊನೆಗೆ ರಾಜ್ಯಪಾಲ ಜಗದೀಪ್ ಧನ್‌ಕರ್ ಅವರೇ ಸ್ಥಳಕ್ಕೆ ಧಾವಿಸಿ, ಸುಪ್ರಿಯೋರನ್ನು ತಮ್ಮ ಕಾರಿನಲ್ಲಿ ಕರೆದೊಯ್ದರು. ಇದರ ಬೆನ್ನಲ್ಲೇ ಆಕ್ರೋಶ ಗೊಂಡ ಎಬಿವಿಪಿ ಸದಸ್ಯರು, ಕಲಾ ವಿಭಾಗದ ವಿದ್ಯಾರ್ಥಿ ಸಂಘದ ಕಚೇರಿಯ ಪೀಠೊ ಪಕರಣ, ಕಂಪ್ಯೂಟರ್, ಸೀಲಿಂಗ್ ಫ್ಯಾನ್‌ಗಳಿಗೆ ಬೆಂಕಿ ಹಚ್ಚಿ, ನಾಮಫಲಕಕ್ಕೆ ಮಸಿ ಬಳಿಸಿದ್ದರು.
ಸರ್ಜಿಕಲ್ ದಾಳಿ ನಡೆಸುವೆವು: ಘಟನೆ ಕುರಿತು ಶುಕ್ರವಾರ ಮಾತನಾಡಿರುವ ಪ.ಬಂಗಾಲ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, “ಜಾಧವ್‌ಪುರ ವಿವಿಯು ದೇಶವಿರೋಧಿಗಳು, ಕಮ್ಯೂ ನಿಸ್ಟರ ತಾಣವಾಗಿದೆ. ಇದನ್ನು ನಾಶ ಮಾಡಲು ನಮ್ಮ ಸದಸ್ಯರು ಬಾಲಾಕೋಟ್ ಮಾದರಿಯ ಸರ್ಜಿ ಕಲ್ ದಾಳಿ ನಡೆಸಲಿದ್ದಾರೆ’ ಎಂದು ಹೇಳಿದ್ದಾರೆ.