ಶಾಲೆಯ ಧ್ವಜಸ್ತಂಭಕ್ಕೆ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜ ಕಟ್ಟಿರುವುದನ್ನು ಖಂಡಿಸಿ ತಾಲೂಕು ಯುವ ಕಾಂಗ್ರೆಸ್
ಕಾರ್ಯಕರ್ತರು ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ತಡೆದು ವಿಧನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪನವರ ಪ್ರತಿಕೃತಿ
ಧಹಿಸಿ ಆಕ್ರೋಶ ವ್ಯಕ್ತಪಡಿಸಿದರು.
Advertisement
ಸೋಮವಾರ ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವೃತ್ತದಿಂದ ಬಿಜೆಪಿ ವಿರುದ್ಧ ಘೊಷಣೆ ಕೂಗುತ್ತ ಮಿನಿ ವಿಧಾನಸೌಧಕ್ಕೆ ತೆರಳಿದರು. ಅದಕ್ಕೂ ಪೂರ್ವದಲ್ಲಿ ಮಿನಿ ವಿಧಾನಸೌಧದ ಮುಂದೆಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಖಾದರ, ತಾಲೂಕಾ ಯುವ ಅಧ್ಯಕ್ಷ ಅಬುಬಕರ ಬಿಜಾಪುರ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರುಕ್ಮಿಣಿ ರಾಠೊಡ, ಮುಖಂಡ ಶಂಕರಗೌಡ ಬಿರಾದಾರ ಮಾತನಾಡಿ, ಬಿಜೆಪಿ ಬಾಯಿ ಚಪಲಕ್ಕೆ ಮಾತ್ರ ನಾವು ದೇಶ ಪ್ರೇಮಿಗಳು, ದೇಶಾಭಿಮಾನಿಗಳು ಹಾಗೂ ದೇಶದ ಸಂಸ್ಕೃತಿ ಸಂಪ್ರಾದಾಯಕ್ಕೆ ಬದ್ಧ ಎಂದು ಹೇಳುತ್ತಾರೆ. ಆದರೆ ಅವರು ಮಾಡುವ ಕೆಲಸ ನೋಡಿದರೆ ಮನುಕುಲವೇ ನಾಚುವಂತಾಗಿದೆ ಎಂದು ಹೇಳಿದರು.
ಕಾರ್ಯಕರ್ತರು ತಮ್ಮ ಪಕ್ಷದ ಧ್ವಜ ಕಟ್ಟುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು
ಸಮಗ್ರ ತನಿಕೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಕೃತ್ಯ ಎಸಗಿದ ವ್ಯಕ್ತಿಯನ್ನು ಜಿಲ್ಲೆಯಿಂದ ಗಡಿಪಾರು
ಮಾಡಬೇಕು. ಅಂದಾಗ ಮಾತ್ರ ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದರು. ಬಸವನಬಾಗೇವಾಡಿ ತಾಲೂಕು ಇಡಿ ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಹೆಸರುವಾಸಿ. ಸಮಾನತೆ ಸಾರಿದ ಅಣ್ಣ ಬಸವಣ್ಣವರ
ಪುಣ್ಯ ಭೂಮಿಯಲ್ಲಿ ಜಾತಿ- ಜಾತಿ ಮತ್ತು ಧರ್ಮ-ಧರ್ಮದಲ್ಲಿ ವಿಷ ಬೀಜ ಬಿತ್ತುವಂತ ಬಿಜೆಪಿ ಕಾರ್ಯಕರ್ತರು ಸರಕಾರಿ ಶಾಲೆ ಆವರಣದ ರಾಷ್ಟ್ರಧ್ವಜ ಹಾರಾಡಿಸುವ ಧ್ವಜಸ್ತಂಭಕ್ಕೆ ಬಿಜೆಪಿ ಧ್ವಜ ಹಾರಿಸಿ ಮೂಲಕ ರಾಷ್ಟ್ರಕ್ಕೆ ಅವಮಾನಗೊಳಿಸಿದ್ದಾರೆ.
ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಜಿಲ್ಲಾಡಳಿತ ಹಿಂದೇಟು ಹಾಕಿದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ
ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಂತರ ತಹಶೀಲ್ದಾರ್ ಮೂಲಕ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಪುರಸಭೆ ಸದಸ್ಯ ಮುದುಕು ಬಸರಕೊಡ, ತಾನಾಜಿ ನಾಗರಾಳ,
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸಾದ ದಳವಾಯಿ, ಮುತ್ತು ಪತ್ತಾರ, ದಾನ್‌ಅವಾಜಿ ಮುಲ್ಲಾ, ದೇವೇಂದ್ರ
ಚವ್ಹಾಣ, ವಾಸಿಮ್ ಪಕಾಲಿ, ಈರಣ್ಣ ಕುಂಬಾರ, ಸುಂದರಪಾಲ ರಾಠೊಡ, ಕಾಶಿಮ್ ಹವಾಲ್ದಾರ್, ಬಂದೇನವಾಜ ಪಕಾಲಿ,
ಬಂಡೆಪ್ಪ ನಾಟೀಕಾರ, ಪ್ರವೀಣ ವಾಲೀಕಾರ, ಸದಾಶಿವ ಚಿಮ್ಮಲಗಿ, ಲತೀಫ್ ಬಾಗವಾನ, ಸಿದ್ರಾಮ ಪಾತ್ರೋಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.