Advertisement

ಕಾಂಗ್ರೆಸ್‌ ವಿರುದ್ದ ಬಿಜೆಪಿ ಪ್ರತಿಭಟನೆ

01:26 PM Mar 01, 2022 | Team Udayavani |

ಸುರಪುರ: ಕಾಂಗ್ರೆಸ್‌ ಪಕ್ಷದವರು ರಾಜ್ಯದ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತು ಚರ್ಚೆ ನಡೆಸಲು ಅವಕಾಶ ಕೊಡದೆ ಅಧಿವೇಶನ ಹಾಳು ಮಾಡುವುದರೊಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ತಾಲೂಕು ಘಟಕದ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟಿಸಿದರು.

Advertisement

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ರಾಜುಗೌಡ ನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ತಹಶೀಲ್ದಾರ್‌ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದರು.

ಬಳಿಕ ಶಾಸಕ ರಾಜುಗೌಡ ಮಾತನಾಡಿ, ವಿಧಾನಸಭೆ ಕಲಾಪವನ್ನು ಕಾಂಗ್ರೆಸ್‌ ಸ್ವಹಿತಾಸಕ್ತಿ, ಸ್ವಾರ್ಥಕ್ಕಾಗಿ ಬಳಸಿಕೊಂಡಿತು. ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಹಾಗೂ ರಾಜ್ಯದ ಅಭಿವೃದ್ಧಿ ವಿಷಯಗಳ ಕುರಿತು ಬಳಸಿಕೊಳ್ಲಬೇಕಿದ್ದ ಅಧಿವೇಶನವನ್ನು ಕಾಂಗ್ರೆಸ್‌ ಶಾಸಕರು ಅನಗತ್ಯ ವಿಷಯಗಳ ಬಗ್ಗೆ ತಕರಾರು ತೆಗೆದು ಹಾಳು ಮಾಡಿದರು. ಅಧಿವೇಶನದಲ್ಲಿ ಧರಣಿ ಕೈಬಿಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿಕೊಂಡರು ತಮ್ಮ ಧೋರಣೆ ಕೈಬಿಡಲಿಲ್ಲ ಎಂದು ದೂರಿದರು.

ಬಿಜೆಪಿ ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ ಮಾತನಾಡಿ, ಕಾಂಗ್ರೆಸ್‌ನವರು ಜನಪರ ಕಾರ್ಯಗಳ ಕುರಿತು ಚರ್ಚಿಸುವ ಪವಿತ್ರ ವಿಧಾನಸಭೆಯ ಘನತೆ-ಗೌರವಗಳನ್ನು ಗಾಳಿಗೆ ತೋರಿ ತಮ್ಮ ವೈಯಕ್ತಿಕ, ಸ್ವಾರ್ಥ ರಾಜಕಾರಣಕ್ಕಾಗಿ ಭಯೋತ್ಪಾದಕರ ಪರವಾಗಿ ವರ್ತಿಸಿ ಸದನದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದಾರೆ ಎಂದು ದೂರಿದರು.

ಹಿಜಾಬ್‌ ಮತ್ತು ಸಮವಸ್ತ್ರ ವಿಷಯದಲ್ಲಿಯೂ ಕಾಂಗ್ರೆಸ್‌ ಶಾಸಕರು ವಿರೋಧ ಮನೋಭಾವ ನೀತಿ ಖಂಡಿಸಿದರು. ಕಾಂಗ್ರೆಸ್‌ ಪಕ್ಷದ ಶಾಸಕರು ಮತ್ತು ನಾಯಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಸಲ್ಲಿಸಲಾಯಿತು.

Advertisement

ಪ್ರಮುಖರಾದ ರಾಜಾ ಹನುಮಪ್ಪನಾಯಕ (ತಾತಾ), ವೇಣುಮಾಧವ ನಾಯಕ, ಸಿದ್ಧನಗೌಡ ಕರಿಬಾವಿ, ಶ್ರವಣನಾಯಕ, ನರಸಿಂಹಕಾಂತ ಪಂಚಮಗಿರಿ, ಮಾನಪ್ಪ ಪ್ಯಾಪಲಿ, ಹೊನ್ನಪ್ಪ ತಳವಾರ, ಶರಣುನಾಯಕ ಬೈರಿಮಡ್ಡಿ, ಪಾರಪ್ಪ ಗುತ್ತೇದಾರ್‌, ಸಣ್ಣ ದೇಸಾಯಿ ದೇವರಗೋನಾಲ, ದೇವರಾಜ ನಾಯಕ, ರಮೇಶ ಗುತ್ತೇದಾರ್‌, ಮಲ್ಲು ವಿಷ್ಣು ಸೇನಾ, ವೆಂಕಟೇಶ ಚಟ್ನಳ್ಳಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next