Advertisement

ಸುಗಮ ಕಲಾಪಕ್ಕೆ ಅಡ್ಡಿ ಮಾಡಿದ ಕಾಂಗ್ರೆಸ್‌ ವಿರುದ್ಧ ಆಕ್ರೋಶ

01:07 PM Mar 01, 2022 | Team Udayavani |

ನಂಜನಗೂಡು: ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ನಡೆಯಬೇಕಾಗಿದ್ದು ಸದನದಲ್ಲಿ. ಅದಕ್ಕಾಗಿ ಅನುಭವಿ ರಾಜಕಾರಣಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸುಗಮ ಕಲಾಪಕ್ಕೆ ಸಹಕರಿಸಬೇಕೆಂದು ಶಾಸಕ ಹರ್ಷವರ್ಧನ್‌ ಮನವಿ ಮಾಡಿದರು.

Advertisement

ಇತ್ತೀಚೆಗೆ ಸದಸನದಲ್ಲಿ ಕಾಂಗ್ರೆಸ್‌ ಕೈಗೊಂಡಿದ್ದ ಪ್ರತಿಭಟನೆ ವಿರೋಧಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ನಗರದ ಮಿನಿವಿಧಾನಸೌಧ ಎದುರುಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿಮಾತನಾಡಿದರು. ಸಚಿವ ಈಶ್ವರಪ್ಪ ಅವರ ಮೇಲಿನಆರೋಪಕ್ಕೆ ದಾಖಲೆಯೇ ಇಲ್ಲ. ಕಾಂಗ್ರೆಸ್‌ ನಾಯಕರಿಗೆ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಇದಕ್ಕಾಗಿಯೇ ಕಲಾಪದಿಂದ ಹೊರಗುಳಿದಿದ್ದಾರೆ. ಅವರಿಗೆ ನಿಜವಾಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದಲ್ಲಿ ಸದನದಲ್ಲಿ ಚರ್ಚೆ ನಡೆಸಲಿ ಎಂದು ಹೇಳಿದರು.

ಕಾಂಗ್ರೆಸ್‌ ವಿರುದ್ಧ ವ್ಯಂಗ್ಯ: ರಾಜ್ಯ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಮಹದೇವಯ್ಯಮಾತನಾಡಿ, ರಾಜ್ಯದ ಅಭಿವೃದ್ಧಿ ಕುರಿತು ಚೆರ್ಚೆ ನಡೆಯಬೇಕಾಗಿದ್ದು ವಿಧಾನಸಭೆಯಲ್ಲಿ, ಬೀದಿಯಲ್ಲಲ್ಲ. ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್‌ ನಾಯಕರಿಗೆ ಮೇಕೆದಾಟುನಂತಹ ಜನಪರಯೋಜನೆ ಜ್ಞಾಪಕಕ್ಕೆ ಬಂತಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದ ಜನ ಅರ್ಥ ಮಾಡಿಕೊಳ್ಳುತ್ತಾರೆ: ಸದನನಡೆಯುತ್ತಿರುವುದು ಸಾರ್ವಜನಿಕರ ಹಣದಲ್ಲಿ.ಇದು ಕಲಾಪ ಬಹಿಷ್ಕರಿಸಿ ಧರಣಿ ಕುಳಿತ ನಮ್ಮವಿರೋಧ ಪಕ್ಷದ ನಾಯಕರಿಗೆ ಅರ್ಥವಾಗಬೇಕು.ಕಾಂಗ್ರೆಸ್‌ನವರಿಗೆ ಅಭಿವೃದ್ಧಿಯೂ ಬೇಡ, ರಾಜ್ಯದ ಶಾಂತಿ ನೆಮ್ಮದಿಯೂ ಬೇಡ, ಜನತೆ ದಾರಿ ತಪ್ಪಿಸಲು ಪಾದಯಾತ್ರೆಯ ನಾಟಕ ವಾಡುತ್ತಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.

ಅಧಿಕಾರದಿಂದ ದೂರವಿಟ್ಟಿದ್ದಾರೆ: ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್‌ ಮಾತನಾಡುತ್ತ, ಕಾಂಗ್ರೆಸ್‌ ಪಕ್ಷದ ಬೂಟಾಟಿಕೆಯನ್ನು ಬಯಲು ಮಾಡಲೆಂದೇ ನಾವು ಪ್ರತಿಭಟನೆಕೈಗೊಳ್ಳಬೇಕಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್‌ ನಾಯಕರ ನಾಟಕ ಆರಂಭವಾಗುತ್ತದೆ,ನಿಮ್ಮ ಈ ಧೋರಣೆ ಅರಿತೇ ಜನ ಅಧಿಕಾರದಿಂದ ದೂರವಿಟ್ಟಿದ್ದಾರೆ ಎಂದರು.

Advertisement

ದ್ವೇಷದ ಕಿಚ್ಚು: ಶಿಕ್ಷಣಕ್ಕೆ ಸಿಮೀತವಾದ ಮಕ್ಕಳಲ್ಲಿಮೇಲು ಕೀಳು ಎಂಬ ಭೇದಭಾವ ಸಿದ್ದರಾಮಯ್ಯಅವರ ಆಡಳಿತ ಅವಧಿಯಲ್ಲೇ ತೋರಲಾಯಿತು.ರಾಜ್ಯದಲ್ಲಿ ಶಾಂತಿ ನೆಲಸುವುದು ಕಾಂಗ್ರೆಸ್‌ ಬೇಡವಾಗಿದೆ. ಹಿಜಾಬ್‌ ವಿವಾದ, ಶಿವಮೊಗ್ಗದಲ್ಲಿಹರ್ಷನ ಹತ್ಯೆ ಪ್ರಕರಣದಲ್ಲಿ ದ್ವೇಷದ ಕಿಚ್ಚು ಹಚ್ಚಲಾರಂಭಿಸಿದೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಸರ್ಕಾರದ ಅಭಿವೃದ್ಧಿ ಕಾರ್ಯನೋಡಿದ ಕಾಂಗ್ರೆಸ್‌ಅಭಿವೃದ್ಧಿಯನ್ನು ಕೈಬಿಟ್ಟು ಬೇರೆ ವಿಷಯಗಳಕುರಿತು ಚರ್ಚೆ ಆರಂಭಿಸಿದೆ ಎಂದು ಮಂಗಳಾ ಆರೋಪಿಸಿದರು.

ತಹಶೀಲ್ದಾರ್‌ ಶಿವಸ್ವಾಮಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಹೊರಳವಾಡಿ ಮಹೇಶ ಕಾಂಗ್ರೆಸ್‌ ವಿರುದ್ಧ ದೂರು ನೀಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಎಸ್‌.ಮಹದೇವಪ್ಪ, ಕುಂಬರಳ್ಳಿ ಸುಬ್ಬಣ್ಣ,ಕೆಂಪಣ್ಣ, ಪುಟ್ಟಸ್ವಾಮಿ, ಮಹದೇವಸ್ವಾಮಿ, ಚಿಕ್ಕರಂಗನಾಯಕ, ಸಂಜಯ ಶರ್ಮ, ಕಪಿಲೇಶ, ಸಣ್ಣಯ್ಯ, ಮಹದೇವಪ್ರಸಾದ, ಬಾಲಚಂದ್ರ, ದೇವಪುತ್ರ, ರಂಗಸ್ವಾಮಿ, ಕಾರ್ಯಕರ್ತರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next