Advertisement

“ಪರಿವಾರ’ಕ್ಕೆ ಬಹುಮತ ಬರದಿರುವ ಹಂಬಲ!

08:42 PM Feb 16, 2023 | Team Udayavani |

ವಿಧಾನ ಪರಿಷತ್ತು: ಜನತಾ ಪರಿವಾರ ಕಾಲಾಂತರದಲ್ಲಿ ದಳವಾಗಿ ಈಗ ಒಂದು ಪರಿವಾರಕ್ಕೆ ಸೀಮಿತವಾಗಿದೆ. ಆ “ಪರಿವಾರ’ವು ಯಾವುದೇ ಕಾರಣಕ್ಕೂ ಬಹುಮತ ಬರದಿರಲಿ ಎನ್ನುವುದೇ ಅದರ “ಹಂಬಲ’ ಎಂದು ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್‌ ಆರೋಪಿಸಿದರು.

Advertisement

ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಇಡೀ ದೇಶವನ್ನು ಜನತಾ ಪರಿವಾರ ಆಳುತ್ತಿತ್ತು. ಆದರೆ, ದಳಗಳಾಗಿ ಈಗ ಒಂದು ಪರಿವಾರವಾಗಿ ಉಳಿದಿದೆ. ಗೆಲ್ಲುವ ಸಾಧ್ಯತೆ ಇರುವ ಕಡೆ “ಪರಿವಾರ’ದವರಿಗೇ ಟಿಕೆಟ್‌ ದೊರೆಯುತ್ತದೆ. ಸೋಲುವ ಕಡೆ ಕಾರ್ಯಕರ್ತರಿಗೆ ಟಿಕೆಟ್‌ ದಕ್ಕುತ್ತದೆ. ಏನೇ ಆದರೂ ಬಹುಮತ ಬರದಿರಲಿ. ಆ ಮೂಲಕ ಯಾರಾದರೂ ಬೆನ್ನೇರಿ ಅಧಿಕಾರ ಹಿಡಿಯಬಹುದು ಎಂದು ಯಾವಾಗಲೂ ಹವಣಿಸುತ್ತಿರುತ್ತದೆ’ ಎಂದು ಟೀಕಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಭೋಜೇಗೌಡ, ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಟಾಗಿಲು ತೆರೆಯುವಂತೆ ಮಾಡಿದ್ದೇ ನಾವು (ಜೆಡಿಎಸ್‌). ನಮ್ಮ ಮೇಲೆಯೇ ನೀವು ಆರೋಪ ಮಾಡುತ್ತಿದ್ದೀರಿ. ಅಷ್ಟಕ್ಕೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ. ಇದು ತಮಗೆ ಅರಿವಿರಲಿ ಎಂದು ತೀಕ್ಷ್ಣವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next