Advertisement

ದ್ವೇಷ ರಾಜಕಾರಣ ಖಂಡಿಸಿ ಬಿಜೆಪಿ ಪಂಜಿನ ಮೆರವಣಿಗೆ

12:46 PM Aug 23, 2017 | Team Udayavani |

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮಂಗಳವಾರ ಸಂಜೆ ಪಂಜಿನ  ಮೆರವಣಿಗೆ ನಡೆಸಿದರು. ನಗರದ ಕೋರ್ಟ್‌ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ನಡೆಯಿತು.

Advertisement

ಕಾಂಗ್ರೆಸ್‌ ಸರಕಾರ ತನ್ನ ಆಡಳಿತ ವೈಫ‌ಲ್ಯ ಮುಚ್ಚಿಕೊಳ್ಳಲು ಬಿಜೆಪಿ ನಾಯಕರ ಮೇಲೆ ವಿನಾಕಾರಣ ಆರೋಪ ಮಾಡುವ ಮೂಲಕ ಸೇಡಿನ ರಾಜಕಾರಣಕ್ಕೆ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು. ಬಿಜೆಪಿ ಮುಖಂಡ ತಿಪ್ಪಣ್ಣ ಮಜ್ಜಗಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸುವ ವಾತಾವರಣ ಇಲ್ಲದಂತಾಗಿದೆ.

ಆಡಳಿತ ಸಂಪೂರ್ಣ ಕುಸಿದಿದ್ದು, ಸರಕಾರದ ಆಡಳಿತ ವೈಫ‌ಲ್ಯ ಮುಚ್ಚಿಕೊಳ್ಳವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ದಾರೆ. ಇಂತಹ ದುರಾಡಳಿತದಿಂದ ಕಾಂಗ್ರೆಸ್‌ ಪಕ್ಷದ ಅವನತಿ ಶುರುವಾಗಿದೆ. ದ್ವೇಷದ ರಾಜಕಾರಣ ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

ಮುಖಂಡರಾದ ಮಹೇಶ ಟೆಂಗಿನಕಾಯಿ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ವೀರಭದ್ರಪ್ಪ ಹಾಲಹರವಿ, ಜಯತೀರ್ಥ ಕಟ್ಟಿ, ಲಿಂಗರಾಜ ಪಾಟೀಲ, ವಸಂತ ನಾಡಜೋಶಿ, ರವಿ ನಾಯಕ, ವೀರೇಶ ಸಂಗಳದ, ಮಹೇಂದ್ರ ಕೌತಾಳ, ಉಮಾ ಮುಕುಂದ, ಸೀಮಾ ಲದವಾ, ಭಾರತಿ ಪಾಟೀಲ, ಪಲ್ಲವಿ ಹೂಲಿ, ವಿಜಯಲಕ್ಷ್ಮೀ ತಿಮೋಲಿ, ರಂಜನಾ ಬಂಕಾಪುರ ಹಾಗೂ ಕಾರ್ಯಕರ್ತರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next