Advertisement
ಈ ವೇಳೆ “400 ಪಾರ್’ (400ಕ್ಕೂ ಹೆಚ್ಚು) ಎಂಬ ಘೋಷಣೆಗಳ ಮೂಲಕ ಜನರು ಪ್ರಧಾನಿಯನ್ನು ಸ್ವಾಗತಿಸಿ ದ ರು. ಬಳಿಕ ಮಾತನಾಡಿದ ಅವ ರು, ಜನರ ಸೇವೆಯೇ ನನ್ನ ಗಮ್ಯ. ನಾನು ಹೆಡ್‌ಲೈನ್‌ನಲ್ಲಿ ಸುದ್ದಿಯಾಗುವು ದಕ್ಕಾಗಿ ಕೆಲಸ ಮಾಡಿಲ್ಲ. ಡೆಡ್‌ಲೈನ್‌ಗಳು ಮೀರ ದಂತೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಹೈದರಾಬಾದ್: “ಭ್ರಷ್ಟಾಚಾರ ಮಾಡಿದ ಯಾವೊಬ್ಬ ವ್ಯಕ್ತಿಯನ್ನೂ ಸುಮ್ಮನೆ ಬಿಡುವುದಿಲ್ಲ’. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತೆಲಂಗಾಣ ಜನತೆಗೆ ವಾಗ್ಧಾನ ನೀಡಿದ್ದಾರೆ. ದಿಲ್ಲಿಯ ಮದ್ಯ ಹಗರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಬಂಧನ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ. ನಾಗರ್‌ಕರ್ನೂಲ್‌ನಲ್ಲಿ ಶನಿವಾರ ನಡೆದ ಬಿಜೆಪಿ ರ್ಯಾಲಿಯನ್ನು ಉದ್ದೇ ಶಿಸಿ ಪ್ರಧಾನಿ ಮಾತನಾಡಿದ್ದಾರೆ. ಈ ವೇಳೆ ಬಿಆರ್‌ಎಸ್ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿ, ಬಿಆರ್‌ಎಸ್ ರಾಜ್ಯದಿಂದ ಹೊರ ಹೋಗಿ ಕಟ್ಟ ರ್ ಭ್ರಷ್ಟ ಪಕ್ಷಗಳೊಂದಿಗೆ ಕೈ ಜೋಡಿಸಿದೆ. ತೆಲಂಗಾಣದ ಅಭಿವೃದ್ಧಿಯ ಕನಸನ್ನು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಸೇರಿ ನಿರ್ನಾಮ ಮಾಡಿಬಿಟ್ಟಿವೆ. ಈ ಎರಡೂ ಪಕ್ಷಗಳು ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಲ್ಲಿ ಬಹುದೊಡ್ಡ ಪಾಲುದಾರರಾಗಿವೆ ಎಂದು ಆರೋಪಿಸಿದ್ದಾರೆ.
Related Articles
Advertisement