Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಹಲವು ಕಾರಣಕ್ಕೆ ಸ್ವಾಭಾವಿಕವಾಗಿ ಅಸಮಾಧಾನ ಇರುತ್ತದೆ. ಕೆಲವರನ್ನು ವ್ಯಕ್ತಿಗತವಾಗಿ, ಇನ್ನೂ ಹಲವರನ್ನು ಗುಂಪಾಗಿ ಕೂತು ಮಾತನಾಡಿಸುವ ಕೆಲಸ ಇರುತ್ತದೆ. ದವಡೆಯೂ ನಮ್ಮದೇ; ನಾಲಿಗೆಯೂ ನಮ್ಮದೇ. ಹಲ್ಲು ನಾಲಿಗೆಗೆ ಕಚ್ಚಿದರೆ ಹಲ್ಲು ಉದುರಿಸಿಕೊಳ್ಳುವ ಕೆಲಸ ಯಾರೂ ಮಾಡುವುದಿಲ್ಲ ಎಂದು ಹೇಳಿದರು.
ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರ ಬೇಕೆಂದಾಗ ಅತಿವೃಷ್ಟಿಯಲ್ಲಿ ಬರುವ ಕಸಕಡ್ಡಿಯನ್ನು ಸಹಿಸಿಕೊಳ್ಳಬೇಕು. ಡ್ಯಾಂ ತುಂಬಿದಾಗ ಮಾತ್ರ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಆಗ ಪವರ್ ಟರ್ಬೆçನ್ ತಿರುಗುತ್ತದೆ. ಅತಿವೃಷ್ಟಿ ಆದಾಗ ವೇಗವಾಗಿ ಅಣೆಕಟ್ಟು ತುಂಬುತ್ತದೆ. ಅದನ್ನು ನೀರಾವರಿ, ವಿದ್ಯುತ್ ಉತ್ಪಾದನೆ ಮಾಡಲು ಬಳಸಬಹುದು. ತೇಲಿಬಂದ ಕಸಕಡ್ಡಿ ಡ್ಯಾಂನಲ್ಲಿ ಫಿಲ್ಟರ್ ಆಗುತ್ತದೆ. ಫಿಲ್ಟರ್ ಮಾಡುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ.
-.ಟಿ.ರವಿ
Related Articles
Advertisement