ಲಕ್ನೋ: ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ಎನಿಸುವಂತ ವಿದ್ಯಮಾನವೊಂದು ಉತ್ತರ ಪ್ರದೇಶದಲ್ಲಿ ಬುಧವಾರ ನಡೆದಿದ್ದು, ಬಿಜೆಪಿ ಸಂಸದರೊಬ್ಬರು ತಮ್ಮದೇ ಪಕ್ಷದ ಶಾಸಕನಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆ ನಡೆದಿದೆ.
ಸಂತ ಕಬೀರ್ ನಗರದ ಬಿಜೆಪಿ ಸಂಸದ ಶರದ್ ತ್ರಿಪಾಠಿ ಅವರು ಮೆಂಧ್ವಾಲ್ ಕ್ಷೇತ್ರದ ಶಾಸಕ ರಾಕೇಶ್ ಸಿಂಗ್ ಬಘೇಲ್ ಅವರಿಗೆ ಜಿಲ್ಲಾ ಸಮನ್ವಯ ಸಮಿತಿ ಸಭೆಯ ವೇದಿಕೆಯಲ್ಲೇ, ಮಾಧ್ಯಮ ಪ್ರತಿನಿಧಿಗಳ ಎದುರಲ್ಲೇ ಚಪ್ಪಲಿಯಲ್ಲಿ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ಲೋಕಸಭಾ ಚುನಾವಣೆಯ ರಣಕಣದ ಕಾವು ಏರಿರುವ ವೇಳೆಯಲ್ಲೇ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ತೀವ್ರ ಮುಜುಗರ ತಂದಿಟ್ಟಿದೆ.
ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ನನ್ನ ಹೆಸರು ಬಿಟ್ಟಿದ್ದೇಕೆ ಎಂದು ತ್ರಿಪಾಠಿ ಅವರು ಪ್ರಶ್ನಿಸಿ ಶಾಸಕ ರಾಕೇಶ್ ಜೊತೆ ಜಗಳಕ್ಕಿಳಿದಿದ್ದಾರೆ ಎನ್ನಲಾಗಿದೆ. ಇಬ್ಬರ ನಡುವೆ ವಾಗ್ವಾದ ತೀವ್ರಗೊಂಡು ತ್ರಿಪಾಠಿ ಬೂಟಿನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣ ರಾಕೇಶ್ ಅವರು ತ್ರಿಪಾಠಿ ಮೇಲೆ ಎರಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಮತ್ತು ಪೊಲೀಸರು ಇಬ್ಬರನ್ನು ತಡೆದಿದ್ದಾರೆ.
Related Articles
ಘಟನೆಯ ಬಳಿಕ ರಾಕೇಶ್ ಸಿಂಗ್ ಬೆಂಬಲಿಗರು ತ್ರಿಪಾಠಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.