ಉತ್ತರ ಪ್ರದೇಶ: ಹತ್ರಾಸ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ದಿಲೇರ್ ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಅಲಿಗಢ್‌ನ ವರುಣ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರು ಬುಧವಾರ ಚಿಕಿತ್ಸೆ ಫಲಿಸದೆ ನಿಧನಹೊಂದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ದಿಲೇರ್ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂಸದ ರಾಜವೀರ್ ದಿಲೇರ್ ಅವರ ಹಠಾತ್ ನಿಧನ ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ರಾಜ್‌ವೀರ್ ದಿಲೇರ್ 2019 ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 2024 ರ ಚುನಾವಣೆಯಲ್ಲಿ ಸಂಸದ ದಿಲೇರ್ ಅವರಿಗೆ ಟಿಕೆಟ್ ನೀಡಲಿಲ್ಲ ಅವರ ಸ್ಥಾನಕ್ಕೆ ಬಿಜೆಪಿ ಹತ್ರಾಸ್ ಕ್ಷೇತ್ರದಿಂದ ಅನುಪ್ ವಾಲ್ಮೀಕಿ ಅವರನ್ನು ಕಣಕ್ಕಿಳಿಸಿದೆ.
ರಾಜ್‌ವೀರ್ ಸಿಂಗ್ ದಿಲೇರ್ ಅವರ ತಂದೆ ಕಿಶನ್ ಲಾಲ್ ದಿಲೇರ್ ಅವರು 1996 ರಿಂದ 2004 ರವರೆಗೆ ಸತತ ನಾಲ್ಕು ಅವಧಿಗೆ ಹತ್ರಾಸ್ ಕ್ಷೇತ್ರದಿಂದ ಸಂಸದರಾಗಿದ್ದರು.
ಇದನ್ನೂ ಓದಿ: Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್