Advertisement

Cauvery issueತಮಿಳುನಾಡು ಸಿಎಂ ಭೇಟಿಗೆ 48 ತಾಸು ಕಾದು ಬರಿಗೈಯಲ್ಲಿ ಮರಳಿದ ಲೆಹರ್‌ ಸಿಂಗ್‌!

11:25 PM Sep 28, 2023 | Team Udayavani |

ಬೆಂಗಳೂರು: ಕಾವೇರಿ ಬಗ್ಗೆ ಪ್ರಧಾನಿಮಧ್ಯಸ್ಥಿಕೆಗಾಗಿ ರಾಜ್ಯ ಸರಕಾರ ಒತ್ತಾಯಿಸುತ್ತಿರುವುದರ ಮಧ್ಯೆಯೇ, ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ಭೇಟಿ ಮಾಡಿ ವಿವಾದ ಬಗೆಹರಿಸುವಂತೆ ಮನವಿ ಮಾಡಲು ಸತತ 48 ಗಂಟೆಗಳ ಕಾದು ಬರಿಗೈಯಲ್ಲಿ ಮರಳಿರುವ ಸಂಗತಿ ಬಹಿರಂಗವಾಗಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ವಿಚಾರ ತಿಳಿಸಿದ ಲೆಹರ್‌ ಸಿಂಗ್‌, ಬೆಂಗಳೂರಿನಲ್ಲಿ ಉಂಟಾಗಿರುವ ಕುಡಿಯುವ ನೀರಿನ ಬಿಕ್ಕಟ್ಟು, ಕರ್ನಾಟಕದ ಬರ ಪರಿಸ್ಥಿತಿ ಬಗ್ಗೆ ಸ್ಟಾಲಿನ್‌ಗೆ ಮನವರಿಕೆ ಮಾಡಲು ಬಯಸಿದ್ದೆ. ಈ ಸಮಸ್ಯೆಯನ್ನು ಪ್ರಾದೇಶಿಕ ಸಂಘರ್ಷವಾಗಿ ನೋಡುವ ಬದಲು, ಮಾನವೀಯ ನೆಲೆಯಲ್ಲಿ ಪರಿಗಣಿಸುವಂತೆ ಆಗ್ರಹಿಸಿ ಅವರಿಗೆ ಪತ್ರವನ್ನೂ ಬರೆದಿದ್ದೇನೆ ಎಂದು ತಿಳಿಸಿದರು. ನಾನು ಚೆನ್ನೈಗೆ ಹೋಗಿ ಎರಡು ದಿನಗಳ ಕಾಲ ಅಲ್ಲಿದ್ದರೂ ಸ್ಟಾಲಿನ್‌ ಭೇಟಿಗೆ ಅವಕಾಶ ಸಿಗಲಿಲ್ಲ. ನನ್ನ ಭೇಟಿ ರಾಜಕೀಯ ರಹಿತವಾಗಿತ್ತು ಎಂದು ಹೇಳಿದರು.

ಡಿಎಂಕೆ ಸಂಸದರು ಮತ್ತು ತಮಿಳುನಾಡು ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಇದು ಅತ್ಯಂತ ಸಕಾರಾತ್ಮಕವಾಗಿತ್ತು. ಡಿಎಂಕೆ ನಾಯಕರು ನಾನು ನೀಡಿದ ಸಲಹೆಗಳನ್ನು ಸ್ವೀಕರಿಸಿದರು. ಎರಡೂ ಸರಕಾರಗಳ ನಡುವಿನ ಚರ್ಚೆಯಿಂದ ಪರಿಹಾರ ದೊರೆಯುತ್ತದೆ ಎಂಬ ನಿಲುವನ್ನು ಅವರೆಲ್ಲರೂ ಹೊಂದಿದ್ದಾರೆ. ಆದ್ದರಿಂದ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಭೇಟಿಯಾಗಿ ಮಾತುಕತೆ ನಡೆಸಿದರೆ ಕಾವೇರಿ ಬಿಕ್ಕಟ್ಟಿಗೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next