ಬೆಂಗಳೂರು: ವಿಧಾನ ಪರಿಷತ್ ನಲ್ಲಿ ನಡೆದಿದ್ದ ಗದ್ದಲ ಪ್ರಕರಣದ ತನಿಖೆ ಮಾಡಲು ರಚನೆಯಾಗಿದ್ದ ಸದನ ಸಮಿತಿಗೆ ವಿಘ್ನ ಎದುರಾಗಿದೆ. ಸಮಿತಿಯ ಬಿಜೆಪಿ ಸದಸ್ಯರಾದ ಎಚ್ ವಿಶ್ವನಾಥ್ ಮತ್ತು ಎಸ್.ವಿ. ಸಂಕನೂರು ರಾಜೀನಾಮೆ ನೀಡಿದ್ದಾರೆ.
ಸಮಿತಿ ಅಧ್ಯಕ್ಷ ಮರಿತಿಬ್ಬೇ ಗೌಡರಿಗೆ ವಿಶ್ವನಾಥ್ ಮತ್ತು ಎಸ್. ವಿ ಸಂಕನೂರು ರಾಜೀನಾಮೆ ಪತ್ರ ನೀಡಿದ್ದಾರೆ.
ಬಳಿಕ ಮಾತನಾಡಿದ ಹೆಚ್. ವಿಶ್ವನಾಥ್, ಇದು ನಾವೆಲ್ಲಾ ತಲೆ ತಗ್ಗಿಸುವ ವಿಚಾರ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಉನ್ನತ ಮಟ್ಟದ ತನಿಖೆ ಆಗಬೇಕು. ನಾವೇ ಆ ಗದ್ದಲ ಸಂಧರ್ಭದಲ್ಲಿ ಅಲ್ಲಿ ಇದ್ದೆವು. ಹಾಗಾಗಿ ನಾನು ಇದನ್ನು ಧಿಕ್ಕರಿಸಿ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಎಂದರು.
ಇದನ್ನೂ ಓದಿ:ರಾಜ್ಯ ಸರ್ಕಾರ ತೊಗರಿಗೆ ಪ್ರೋತ್ಸಾಹ ಧನ ನೀಡದೆ ರೈತರಿಗೆ ಅನ್ಯಾಯ: ಪ್ರಿಯಾಂಕ್ ಖರ್ಗೆ ಟೀಕೆ
ಲೋಕಸಭಾ ಅಧ್ಯಕ್ಷ ಓಂಬಿರ್ಲಾ ಕೂಡಾ ಇದರ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಹಾಗಾಗಿ ಸರ್ಕಾರ ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ಒತ್ತಾಯಿಸಿದ್ದಾರೆ.