Advertisement

ಜ್ಯೋತಿರಾದಿತ್ಯಗೆ ಗುಂಡಿಕ್ಕಿ ಕೊಲ್ಲುವೆ: BJP ಶಾಸಕಿ ಪುತ್ರನ ಧಮ್ಕಿ

03:56 PM Sep 03, 2018 | Team Udayavani |

ಹೊಸದಿಲ್ಲಿ : ಬಿಜೆಪಿ ಶಾಸಕಿ ಉಮಾ ದೇವಿ ಖತಿಕ್‌ ಅವರ ಪುತ್ರ ಪ್ರಿನ್ಸ್‌ ದೀಪ್‌ ಲಾಲ್‌ಚಂದ್‌ ಅವರು ಇಂದು ಸೋಮವಾರ ತಮ್ಮ ಸಾಮಾಜಿಕ ಮಾದ್ಯಮ ಪೋಸ್ಟ್‌ ಒಂದರಲ್ಲಿ ತಾನು ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಗುಂಡಿಕ್ಕಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ.

Advertisement

ಲಾಲ್‌ಚಂದ್‌ ಖತಿಕ್‌ ಅವರು ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ : “ಜ್ಯೋತಿರಾದಿತ್ಯ ಸಿಂದಿಯಾ; ನಿಮ್ಮ ಧಮನಿಯಲ್ಲಿ ಝಾನ್ಸಿ ಕೀ ರಾಣಿಯನ್ನು ಕೊಂದ ಜಿವಾಜಿರಾವ್‌ ನ ರಕ್ತ ಹರಿಯುತ್ತಿದೆ; ಒಂದೊಮ್ಮೆ ನೀವು ಹತ್ತಾ ಜಿಲ್ಲೆ ಪ್ರವೇಶಿಸಿದರೆ ನಾನು ನಿಮ್ಮನ್ನು ಗುಂಡಿಕ್ಕಿ ಕೊಲ್ಲುತ್ತೇನೆ; ಒಂದೋ ನೀವು ಸಾಯಬೇಕು, ಇಲ್ಲವೇ ನಾನು ಸಾಯಬೇಕು’.

ಜ್ಯೋತಿರಾದಿತ್ಯ ಸಿಂದಿಯಾ ಅವರು ಇದೇ ಸೆ.5ರಂದು ಹತ್ತಾ ಜಿಲ್ಲೆಗೆ ಭೇಟಿ ನೀಡಿ ಅಲ್ಲಿ ಚುನಾವಣಾ ಪ್ರಚಾರ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಲಿದ್ದಾರೆ. ಅದಕ್ಕೆ ಮೊದಲೇ ಈಗ ಬಿಜೆಪಿ ಶಾಸಕಿಯ ಪುತ್ರನಿಂದ ಅವರಿಗೆ ಕೊಲೆ ಬೆದರಿಕೆ ಬಂದಿದೆ. 

“ಇದೊಂದು ದುರದೃಷ್ಟಕರ ಪೋಸ್ಟ್‌, ಅದನ್ನು ತೆಗೆದು ಹಾಕುವಂತೆ ನಾನು ನನ್ನ ಮಗನಿಗೆ ಹೇಳುತ್ತೇನೆ’ ಎಂದು ಮಧ್ಯ ಪ್ರದೇಶದ ಹತ್ತಾ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕಿ ಉಮಾ ದೇವಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next