ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಹದಿನೈದನೇ ಮೆಗಾ ಆರ್ಥಿಕ ಸಹಾಯ ಮೇಳದ ಉದ್ಘಾಟನಾ ಸಮಾರಂಭವು ಜೂ. 9 ರಂದು ಬೆಳಗ್ಗೆ 10 ರಿಂದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಟಾರಿ ಸಭಾಗೃಹದಲ್ಲಿ ದಿ| ವಾಸು ಕೆ. ಶೆಟ್ಟಿ ಅವರ ಸ್ಮರಣಾರ್ಥ ಚರಿಷ್ಮಾ ಬಿಲ್ಡರ್ì ಲಿಮಿಟೆಡ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಸುಧೀರ್ ವಿ. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಅದ್ದೂರಿಯಾಗಿ ಜರಗಲಿದೆ.
ಪೂರ್ವಾಹ್ನ 10 ರಿಂದ ಸಂಘದ ಪ್ರಾದೇಶಿಕ ಸಮಿತಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಜರಗಲಿದ್ದು, ಪೂರ್ವಾಹ್ನ 11 ರಿಂದ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಕರ್ನಾಟಕ ಚಿಕ್ಕಮಗಳೂರು ಶಾಸಕ, ಕರ್ನಾಟಕ ಸರಕಾರದ ಮಾಜಿ ಉನ್ನತ ಶಿಕ್ಷಣ ಸಚಿವ ಸಿ. ಟಿ. ರವಿ ಅವರು ಆಗಮಿಸಲಿದ್ದಾರೆ.
ವಿವಿಧ ಪ್ರಾದೇಶಿಕ ಸಮಿತಿಗಳಿಂದ ಸಹಾಯ ಧನ ವಿತರಣೆ :
ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಳ ಶೈಕ್ಷಣಿಕ ನೆರವು ವಿತರಣೆಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುವುದು. ಜೂ. 12 ರಂದು ಅಪರಾಹ್ನ 4 ರಿಂದ ಕಾಂದಿವಲಿ ಪೂರ್ವದ ಹೊಟೇಲ್ ಅವೆನ್ಯೂ ಸಭಾಂಗಣದಲ್ಲಿ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಆರ್ಥಿಕ ನೆರವು ವಿತರಣೆ ನಡೆಯಲಿದೆ.
ಜೂ. 16 ರಂದು ಪೂರ್ವಾಹ್ನ 11 ರಿಂದ ವಸಾಯಿರೋಡ್ ಪೂರ್ವದ ಹೊಟೇಲ್ ಗ್ರಾÂಂಡ್ ರೆಸೆಡೆನ್ಸಿಯಲ್ಲಿ ಬಂಟರ ಸಂಘದ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ವತಿಯಿಂದ, ಜೂ. 16 ರಂದು ಸಂಜೆ 4 ರಿಂದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಮೀರಾರೋಡ್ ಪೂರ್ವದ ಸೈಂಟ್ ಥೋಮಸ್ ಚರ್ಚ್ ಸಭಾಂಗಣದಲ್ಲಿ ಸಹಾಯಧನ ವಿತರಿಸಲಾಗುವುದು.
ಜೂ. 23 ರಂದು ಬೆಳಗ್ಗೆ 9 ರಿಂದ ಡೊಂಬಿವಲಿ ಪೂರ್ವದ ಹೊಟೇಲ್ ಸುಯೋಗ್ ಹಾಲ್‌ನಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ, ಜೂ. 23 ರಂದು ಪೂರ್ವಾಹ್ನ 11 ರಿಂದ ಕಲ್ಯಾಣ್ ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ವತಿಯಿಂದ ಸಹಾಯಧನ ವಿತರಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಆಯಾಯ ಪ್ರಾದೇಶಿಕ ಸಮಿತಿಗಳಿಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಗುವುದು ಎಂದು ಸಂಘದ ಪ್ರಕಟನೆ ತಿಳಿಸಿದೆ.