ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರು ಕುರಿತು ಟ್ವಿಟರ್ ನಲ್ಲಿ ಪರ-ವಿರೋಧ ಟ್ವಿಟ್‍ಗಳ ಟ್ರೆಂಡಿಂಗ್ ನಲ್ಲಿವೆ.
ಬಾಯ್ಕಾಟ್ ಶಾರುಖ್ ಖಾನ್ ಅಭಿಯಾನಕ್ಕೆ ಹರಿಯಾಣದ ಬಿಜೆಪಿ ನಾಯಕ ಅರುಣ್ ಯಾದವ್ ಅವರು ಕರೆ ನೀಡಿದ ಬೆನ್ನಲ್ಲೆ ಅದು ಟ್ರೆಂಡಿಂಗ್ ನಲ್ಲಿದೆ. ಶಾರುಖ್ 5 ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ಇದೀಗ ‘ಬಾಯ್ಕಾಟ್ ಶಾರುಖ್ ಖಾನ್’ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.
ಪಾಕಿಸ್ತಾನ ಕ್ರಿಕೆಟಿಗರು ವಿಶ್ವದಲ್ಲಿಯೇ ಶ್ರೇಷ್ಠ ಆಟಗಾರರು ಹಾಗೂ ಪಾಕ್ ಕ್ರಿಕೇಟಿಗರು ಚಾಂಪಿಯನ್ ಗಳು ಎಂದು ಈ ಹಿಂದೆ ಶಾರುಖ್ ನೀಡಿದ್ದ ಹೇಳಿಕೆಗಳು ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಶಾರುಖ್ ಅವರನ್ನು ಬಾಯ್ಕಾಟ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
ಇದೇ ವೇಳೆ ಶಾರುಖ್ ವಿರುದ್ಧ ಹಲವಾರು ವಿಚಾರಗಳನ್ನು ಆಕ್ರೋಶದ ಮೂಲಕ ಹೊರ ಹಾಕಿರುವ ನೆಟ್ಟಿಗರು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆ, ಸುಶಾಂತ್ ಸಿಂಗ್ ರಜಪೂತ್ ಚಿತ್ರಕ್ಕೆ ಶಾರುಖ್ ಬೆಂಬಲ ನೀಡದಿರುವ ವಿಚಾರ, ಕರಣ್ ಜೋಹರ್, ಜಾಹ್ನವಿ ಚಿತ್ರಕ್ಕೆ ಬೆಂಬಲ ನೀಡಿದ್ದು, ಇಮ್ರಾನ್ ಖಾನ್ ಅವರೊಂದಿಗಿನ ಶಾರುಖ್ ಫೋಟೋ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸುತ್ತಿದ್ದಾರೆ.
ಇನ್ನು ಶಾರುಖ್ ವಿರುದ್ಧ ಟ್ವಿಟರ್ ನಲ್ಲಿ ಅಭಿಯಾನ ಶುರುವಾಗುತ್ತಲೆ ಅವರ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಾಯಕನ ಪರ ಬ್ಯಾಟ್ ಬೀಸಿದ್ದಾರೆ. “We love Sharuk” ಹ್ಯಾಷ್ ಟ್ಯಾಗ್ ನಡಿ ಅಭಿಯಾನ ಶುರು ಮಾಡಿ, ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.