Advertisement

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ

03:45 PM May 09, 2018 | Team Udayavani |

ತಿ.ನರಸೀಪುರ: ಕೇಂದ್ರ ಸರ್ಕಾರದ ನೆರವು ಪಡೆದು ಕೃಷಿಗೆ ನೀರಾವರಿ ಸೌಲಭ್ಯ, ರಾಂಪುರ ನಾಲೆಗೆ ನೀರು ಹರಿಸುವ ಯೋಜನೆ, ಜಲ ಸಂವರ್ಧನೆ ಯೋಜನೆಯಡಿ ಕೆರೆಗಳನ್ನು ಸಮಗ್ರ ಅಭಿವೃದ್ಧಿ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಪಡಿಸುವ ಪ್ರತಿಜ್ಞೆಯೊಂದಿಗೆ ಬಿಜೆಪಿ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ರೂಪಿಸಿದೆ ಎಂದು ಕ್ಷೇತ್ರಾಧ್ಯಕ್ಷ ಎ.ಎನ್‌.ಶಿವಯ್ಯ ತಿಳಿಸಿದರು.

Advertisement

ಪಟ್ಟಣದ ವರುಣಾ ಬಿಜೆಪಿ ಕಚೇರಿಯಲ್ಲಿ ಕ್ಷೇತ್ರದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕುಡಿಯುವ ನೀರಿನ ಅವಶ್ಯಕತೆ ನೀಗಿಸಲು ಅಗತ್ಯವಿರುವ ಕಡೆ ಹಾಲಿ ಇರುವ ಆರ್‌ಒ ಘಟಕಗಳ ದುರಸ್ತಿ ಮಾಡಿ, ಪುನರ್‌ ಸ್ಥಾಪನೆ ಮಾಡಲಾಗುವುದು.

ಕ್ಷೇತ್ರಾದ್ಯಂತ ಇರುವ ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉತ್ತಮಪಡಿಸಿ ವೈದ್ಯಕೀಯ ಸೇವೆಯನ್ನು ಸಮರ್ಪಕವಾಗಿ ಕಲ್ಪಿಸಿ ವರುಣಾ ಜನರ ಸುದೀರ್ಘ‌ ಕನಸು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಕೃಷಿಗೆ ಅಗತ್ಯ ಸೌಲಭ್ಯ: ನವ ಡಿಜಿಟಲ್‌ ಯುಗಕ್ಕೆ ತಕ್ಕಂತೆ ಸರ್ಕಾರಿ ಶಾಲಾ ಕಾಲೇಜುಗಳನ್ನು ತಂತ್ರಜ್ಞಾನದ ಮೂಲಕ ಮೇಲ್ದಜೇìಗೆ ಏರಿಸಲಾಗುವುದು. ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಯುವ ಜನತೆಗೆ ಕೌಶಲ್ಯ ತರಬೇತಿ, ರೈತರಿಗೆ ಪುಷ್ಪ ಕೃಷಿ, ತೋಟಗಾರಿಕೆಯಂತಹ ಲಾಭದಾಯಕ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಅಗತ್ಯ ಸೌಲಭ್ಯ ಒದಗಿಸುವ ಆಕಾಂಕ್ಷೆಯಿದೆ.

ಅಲ್ಲದೆ ಸಾವಯವ ಕೃಷಿ ಪ್ರೋತ್ಸಾಹ ಭತ್ಯೆಗಳನ್ನು ನೀಡಲಾಗವುದು. ಮಹಿಳೆಯರಿಗೆ ಹಣಕಾಸು ನೆರವು ಒದಗಿಸಿ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಲಾಗುವುದು. ಕಾವೇರಿ ಜಲಾನಯನ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ ಧೀರ್ಘಾವಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗವುದು. ನದಿ ನೀರಿನ ನಿಯಂತ್ರಿತ ಬಳಕೆಗೆ ಒತ್ತು ನೀಡಲಾಗುವುದು. 

Advertisement

ಬಿಜೆಪಿ ಅಭ್ಯರ್ಥಿ ಟಿ.ಬಸವರಾಜು, ಕ್ಷೇತ್ರದ ಚುನಾವಣೆ ಉಸ್ತುವಾರಿ ಹರ್ಯಾಣ ಶಾಸಕ ಮಹೇಶ್‌ ಚೌಹಾಣ್‌, ಚುನಾವಣೆ ಪ್ರಣಾಳಿಕೆ ಸಂಚಾಲಕ ಕೆ.ಎನ್‌.ಪುಟ್ಟಬುದ್ಧಿ, ಜಿಪಂ ಸದಸ್ಯ ಸದಾನಂದ, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ವೆಂಕಟರಮಣಶೆಟ್ಟಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next