Advertisement
ಗುರು ಪೂರ್ಣಿಮೆ ಪ್ರಯುಕ್ತ ಕೆಲವರು ಸಮೀಪದ ದೇವಸ್ಥಾನಗಳಿಗೆ ತೆರಳಿದರೆ ಇನ್ನೂ ಹಲವು ಶಾಸಕರು ರೆಸಾರ್ಟ್‌ನಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಬುಧವಾರವೂ ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಲಿರುವ ಶಾಸಕರು, ಗುರುವಾರ ಬೆಳಗ್ಗೆ ನೇರವಾಗಿ ವಿಧಾನಸಭೆಗೆ ಆಗಮಿಸಲಿದ್ದಾರೆ.
Related Articles
Advertisement
ಕ್ರಿಕೆಟ್ ಆಡಿ ಸಂಭ್ರಮ: ಸಂಜೆ ಹೊತ್ತಿಗೆ ಶಾಸಕರು ಕ್ರಿಕೆಟ್ ಆಟವಾಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬ್ಯಾಟಿಂಗ್ ಮಾಡುವ ಮೂಲಕ ಶಾಸಕರನ್ನು ಹುರಿದುಂಬಿಸಿದರು.
ಹಿರಿಯ- ಕಿರಿಯರ ಸಂವಾದ: ಯಡಿಯೂರಪ್ಪ ಸೇರಿ ಹಿರಿಯ ನಾಯಕರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಇತರರು ರೆಸಾರ್ಟ್‌ನಲ್ಲೇ ವಾಸ್ತವ್ಯ ಹೂಡಿರುವುದರಿಂದ ಕಿರಿಯ ಶಾಸಕರು ಅವರೊಂದಿಗೆ ಆಗಾಗ್ಗೆ ಚರ್ಚೆಯಲ್ಲಿ ತೊಡಗಿದ್ದರು. ಮಧ್ಯಾಹ್ನ ಯಡಿಯೂರಪ್ಪ ಅವರೊಂದಿಗೆ ಒಟ್ಟಿಗೆ ಊಟ ಸವಿದ ಶಾಸಕರು, ಬಳಿಕ ಅವರೊಂದಿಗೂ ಕೆಲ ಹೊತ್ತು ಮಾತುಕತೆ ನಡೆಸಿದರು ಎನ್ನಲಾಗಿದೆ.
ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಸಮೀಪದ ಚಲ್ಲಹಳ್ಳಿ ಗ್ರಾಮದವರು ರೆಸಾರ್ಟ್‌ನಲ್ಲಿ ಭಜನೆ, ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಕುಮಾರ್ ಬಂಗಾರಪ್ಪ, ಎಂ.ಪಿ.ಕುಮಾರಸ್ವಾಮಿ, ಎಸ್.ಆರ್.ವಿಶ್ವನಾಥ್, ಕಳಕಪ್ಪ ಬಂಡಿ ಅವರು ಗೀತ ಗಾಯನ ನಡೆಸಿ, ಗಮನ ಸೆಳೆದರು.
ಹಿರಿಯ ನಾಯಕರ ವಿಶ್ವಾಸ: ಸುಪ್ರೀಂಕೋರ್ಟ್ ಬುಧವಾರ ನೀಡಲಿರುವ ತೀರ್ಪು ಅತೃಪ್ತ ಶಾಸಕರ ಪರವಾಗಿಯೇ ಇರಲಿದೆ ಎಂಬ ವಿಶ್ವಾಸ ಪಕ್ಷದ ಹಿರಿಯ ನಾಯಕರಲ್ಲಿದ್ದಂತಿದೆ. ಹಾಗಾಗಿ, ಇದೇ ವಿಚಾರವನ್ನು ಶಾಸಕರಿಗೂ ತಿಳಿಸಿ ಎಲ್ಲರೂ ಒಟ್ಟಿಗೆ ಸಂಘಟಿತರಾಗಿರುವಂತೆ ಹಿರಿಯ ನಾಯಕರು ಸೂಚಿಸಿದರು ಎಂದು ಮೂಲಗಳು ಹೇಳಿವೆ.
ತೀರ್ಪು ಆಧರಿಸಿ ರಾಜೀನಾಮೆ ಬಗ್ಗೆ ನಿರ್ಧಾರ: ಇನ್ನೂ ಮೂರ್‍ನಾಲ್ಕು ಮಂದಿ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಬುಧವಾರ ಸುಪ್ರೀಂಕೋರ್ಟ್ ನೀಡುವ ತೀರ್ಪು ಆಧರಿಸಿ ಅವರು ಮುಂದುವರಿಯಲಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನಿರ್ಣಾಯಕವೆನಿಸಿದ್ದು, ಅದನ್ನು ಆಧರಿಸಿ ರಾಜೀನಾಮೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಕೆಲ ಶಾಸಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.