Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ನಡೆದಿರುವ ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಕ್ಕೂ ನಷ್ಟವಾಗಿದೆ. ದೇಶದ ಹಲವೆಡೆ ಕಾಂಗ್ರೆಸ್ ಗೆ ಜನ ಆಶೀರ್ವಾದ ಮಾಡಿದ್ದು, ಬಿಜೆಪಿ ಕೆಲವೆಡೆ ಸ್ಥಾನ ಉಳಿಸಿಕೊಂಡಿದ್ದರೂ ಮುಖಭಂಗ ಅನುಭವಿಸಿದೆ ಎಂದು ತಿಳಿಸಿದರು.
Related Articles
Advertisement
ಮತದಾರರು ಅನುಭವಿಸಿದ ನೋವು, ಸಮಸ್ಯೆಯಿಂದ ಸರ್ಕಾರ ಎಷ್ಟೇ ಒತ್ತಡ, ಆಮೀಷ ಒಡ್ಡಿದ್ದರೂ ಕ್ಷೇತ್ರದ ಮತದಾರರು ಕಾಂಗ್ರೆಸ್ ಕೈ ಹಿಡಿದು ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದಾರೆ. ಕ್ಷೇತ್ರದ ಮತದಾರರು, ಕಾರ್ಯಕರ್ತರು, ಜಿಲ್ಲಾ ಮಟ್ಟದ ನಾಯಕರು, ಅಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡಿದರಾಜ್ಯ ನಾಯಕರಿಗೆ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದು ನನ್ನ ಗೆಲುವಲ್ಲ. ಮತದಾರರು ಹಾಗೂ ಕಾರ್ಯಕರ್ತರ ಗೆಲುವು. ಬಿಜೆಪಿ ಆಡಳಿತ ವಿರುದ್ಧ ಕೊಟ್ಟ ತೀರ್ಪು. ಯಾರು ಜನರ ಮಧ್ಯೆ ಇರುತ್ತಾರೋ, ಸ್ಪಂದಿಸುತ್ತಾರೋ, ಕಷ್ಟಕಾಲದಲ್ಲಿ ಭಾಗಿಯಾಗುವವರಿಗೆ ಮತದಾರ ಆಶೀರ್ವಾದ ನೀಡುತ್ತಾನೆ ಎಂದರು.
ಹಾನಗಲ್ ನಲ್ಲಿ ನಾಮಪತ್ರ ಸಲ್ಲಿಸುವಾಗ ಅಲ್ಲಿನ ಗ್ರಾಮದೇವತೆ ದೇವಾಲಯ ಹಾಗೂ ದರ್ಗಾಕ್ಕೆ ಹೋಗಿದ್ದೆ. ಆಗ ನನಗೆ ಸಮಾಧಾನ ಆಗಿರಲಿಲ್ಲ. ನಂತರ ಆ ದೇವಾಲಯಕ್ಕೆ ಹೋಗಿ ಹರಕೆ ಮಾಡಿಕೊಂಡು ನನ್ನ ಪ್ರಚಾರ ಆರಂಭಿಸಿದ್ದೆ. ಈಗ ನನ್ನ ಹರಕೆಯಂತೆ ಇದೇ 5ರಂದು ಅಲ್ಲಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಿಂದಗಿ ಚುನಾವಣೆಯಲ್ಲಿ ಹಲವು ನಾಯಕರು ಒಟ್ಟಾಗಿ ಕೆಲಸ ಮಾಡಿದ್ದು, ಅಲ್ಲಿ ಕೆಲವು ಲೆಕ್ಕಾಚಾರ ಬದಲಾಗಿದ್ದರೂ ಸಮಾಧಾನ ತಂದಿದೆ. ಅಲ್ಲಿನ ಕಾರ್ಯಕರ್ತರು ನಾಯಕರನ್ನು ಕೈ ಬಿಡುವುದಿಲ್ಲ. ನಮ್ಮ ತಪ್ಪು ತಿದ್ದುಕೊಂಡು 2023ರ ಚುನಾವಣೆಗೆ ಸಿದ್ಧರಾಗಲು ಮಾರ್ಗದರ್ಶನ ನೀಡುತ್ತೇವೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.