ಶ್ರೀನಗರ: ಇಲ್ಲಿನ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಅವರ ಕುಟುಂಬ ಸದಸ್ಯರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ.
ಭಾರತೀಯ ಜನತಾ ಪಕ್ಷದ ಬಂಡಿಪೋರಾ ಜಿಲ್ಲಾಧ್ಯಕ್ಷ ಶೇಖ್ ವಸೀಮ್ ಬಾರಿ ಅವರೇ ಭಯೋತ್ಪಾದಕರ ಗುಂಡಿಗೆ ಬಲಿಯಾದವರಾಗಿದ್ದಾರೆ.
ಇವರೊಂದಿಗೆ ಇವರ ಸಹೋದರ ಉಮರ್ ಸುಲ್ತಾನ್ ಹಾಗೂ ತಂದೆ ಬಶೀರ್ ಅಹಮ್ಮದ್ ಅವರನ್ನೂ ಗುಂಡಿನ ದಾಳಿಯಲ್ಲಿ ಕೊಲ್ಲಲಾಗಿದೆ.
ಬುಧವಾರ ರಾತ್ರಿ 9 ಗಂಟೆಯ ಸುಮಾರಿಗೆ ಭಯೋತ್ಪಾದಕರು ವಸೀಂ ಬಾರಿ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದ್ದಾರೆ.
Related Articles
ಈ ಪ್ರದೇಶದಲ್ಲಿದ್ದ ಅವರ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ದಾಳಿ ನಡೆದಿರುವುದನ್ನು ಕಾಶ್ಮೀರದ ಐಜಿ ವಿಜಯ ಕುಮಾರ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.