Advertisement
ವೀಡಿಯೋ ವೈರಲ್ ಮಾಡಿರುವ ಆರೋಪದಡಿ ಬಿಜೆಪಿಯ ಮುಖಂಡ ಪ್ರೀತಂ ಗೌಡ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿ ನಾಲ್ವರ ವಿರುದ್ಧ ಬೆಂಗಳೂರು ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಮತ್ತೊಂದೆಡೆ ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್‌ಐಟಿಯು ಪ್ರಜ್ವಲ್‌ನನ್ನು ಮತ್ತೆ 4 ದಿನ ವಶಕ್ಕೆ ತೆಗೆದುಕೊಂಡಿದೆ. ಪ್ರೀತಂಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.
ಜೈಲುಪಾಲಾಗಿದ್ದ ಪ್ರಜ್ವಲ್ ವಿರುದ್ಧ ದಾಖಲಾಗಿರುವ ಹೊಸ ಎಫ್ಐಆರ್‌ನಲ್ಲಿ ಬಾಡಿ ವಾರಂಟ್ ಮೇಲೆ ವಶಕ್ಕೆ ನೀಡುವಂತೆ ಎಸ್‌ಐಟಿಯು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಮಂಗಳವಾರ ಮನವಿ ಮಾಡಿತ್ತು. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಪ್ರಜ್ವಲ್‌ಗೆ ಇದು ಅತ್ಯಾಚಾರಕ್ಕೆ ಸಂಬಂಧಿಸಿದ 4ನೇ ಎಫ್ಐಆರ್ ಎಂದು ನ್ಯಾಯಾಧೀಶರು ಹೇಳಿದಾಗ ಪ್ರಜ್ವಲ್ ದಿಗಿಲುಗೊಂಡರು. ಜೂನ್ 29ರ ವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
Related Articles
Advertisement