Advertisement

#DKSvsSiddu: ಕಾಂಗ್ರೆಸ್ ಸಿಎಂ ಆಕಾಂಕ್ಷಿಗಳ ವಿರುದ್ಧ ಬಿಜೆಪಿ ಟ್ವೀಟ್ ಟಕ್ಕರ್

04:35 PM Mar 11, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಧ್ಯೆ ಮುಖ್ಯಮಂತ್ರಿ ಕುರ್ಚಿಗಾಗಿ ಕದನ ಆರಂಭವಾಗಿದೆ. ಕನಸಿನಲ್ಲೂ ಸಿಗದ ಮುಖ್ಯಮಂತ್ರಿ ಪಟ್ಟಕ್ಕಾಗಿ ಇವರಿಬ್ಬರ ಕದನದಿಂದ ಕಾಂಗ್ರೆಸ್ ಈಗ ನಾವಿಕನಿಲ್ಲದೆ ದಿಕ್ಕೆಟ್ಟು ನಿಂತಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕೆ ಮಾಡಿದೆ.

Advertisement

#DKSvdSiddu ಹ್ಯಾಷ್ ಟ್ಯಾಗ್ ನಡಿ ಬಿಜೆಪಿ ಕರ್ನಾಟಕವು ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಮಾಡಿದೆ.

ಜೆಡಿಎಸ್‌ ಬಿತ್ತಿದ ಬೀಜ, ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯುತ್ತಿದೆ. ಇದು ಬೆಳೆ ಅಲ್ಲ, ಕಳೆ ಎಂದು ಡಿ ಕೆ ಶಿವಕುಮಾರ್ ಗೆ ಈಗ ಅರಿವಾಗುತ್ತಿದೆ. ಈ ಕಳೆ ಎಂಬ ಸಿದ್ದರಾಮಯ್ಯ ಅವರನ್ನು ಬೇರು ಸಮೇತ ಕಿತ್ತು ಹಾಕಲು ಮೂಲ ಕಾಂಗ್ರೆಸ್ಸಿಗರು ಪಣ ತೊಟ್ಟಿದ್ದಾರೆ ಎಂದು ಟೀಕಿಸಿದೆ.

ಇದನ್ನೂ ಓದಿ:ಕೋವಿಡ್ 19 ಸೋಂಕು ಹೆಚ್ಚಳ; ಮಾರ್ಚ್ 15ರಿಂದ 21ರವರೆಗೆ ನಾಗ್ಪುರದಲ್ಲಿ ಲಾಕ್ ಡೌನ್ ಜಾರಿ

ಡಿಜೆ ಹಳ್ಳಿ ಗಲಭೆ ಪ್ರಕರಣದ ಬಗ್ಗೆ ಉಲ್ಲೇಖಿಸಿ, ವಲಸೆ ನಾಯಕ ಸಿದ್ದರಾಮಯ್ಯ ಅವರು ಸಂತ್ರಸ್ತ ಶಾಸಕ ಅಖಂಡ ಪರವಾಗಿ ನಿಂತರೆ, ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್  ಗಲಭೆಯ ಆರೋಪಿ ಸಂಪತ್‌ ರಾಜ್‌ ಪರವಾಗಿ ನಿಂತರು. ಇವರಿಬ್ಬರ ನಡುವಿನ ಸಂಘರ್ಷದಿಂದ ದಲಿತ ಶಾಸಕನಿಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಗಲಭೆಯ ಆರೋಪಿಗೆ ಬಹಿರಂಗ ಬೆಂಬಲ ನೀಡಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

ವಲಸೆ ನಾಯಕ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾಗುವುದು ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವರ ನಡುವೆ ಮುಸುಕಿನ ಗುದ್ದಾಟವಾಗುತ್ತಿತ್ತು. ಹಿಂದ ಸಮಾವೇಶದ ಮೂಲಕ ಶಕ್ತಿಪ್ರದರ್ಶನಕ್ಕೆ ಸಜ್ಜಾಗಿರುವ ಸಿದ್ದರಾಮಯ್ಯ ಮೇಲೆ ಮುಗಿಬೀಳಲು ಮೂಲ ಕಾಂಗ್ರೆಸ್ಸಿಗರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ನಲ್ಲಿ ಟೀಕಿಸಿದೆ.

ಇದನ್ನೂ ಓದಿ: ಚುನಾವಣೆಯನ್ನು ಪ್ರಜಾಸತ್ತಾತ್ಮಕವಾಗಿ ಗೆಲ್ಲಬೇಕು, ಹಿಂಸೆಯಿಂದಲ್ಲ: ದೀದಿ ಬೆಂಬಲಕ್ಕೆ ಎಚ್ಡಿಕೆ

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್  ನಡುವೆ ಇತ್ತೀಚೆಗೆ ಮೈಸೂರು ಮೇಯರ್ ವಿಚಾರದಲ್ಲಿ ಸಂಘರ್ಷವೇರ್ಪಟ್ಟಿತ್ತು. ಅದು ಕೇವಲ ಮನಸ್ತಾಪವಾಗಿರಲಿಲ್ಲ, ಅದು ಸಿಎಂ ಕುರ್ಚಿಗಾಗಿ ನಡೆದ ಕದನವಾಗಿತ್ತು. ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳು ಪಕ್ಷದಲ್ಲಿ ಹಿಡಿತ ಸಾಧಿಸಲು ಹೆಣಗಾಡುತ್ತಿದ್ದಾರೆ. ಕನಸಿನಲ್ಲೂ ಲಭಿಸದ ಮುಖ್ಯಮಂತ್ರಿ ಪಟ್ಟಕ್ಕಾಗಿ ಇವರಿಬ್ಬರ ನಡುವೆ ಕದನ ಆರಂಭವಾಗಿದೆ. ಈ ಆಂತರಿಕ ಸಂಘರ್ಷ ಶಮನ ಮಾಡುವುದಕ್ಕೆ ಸುರ್ಜೇವಾಲಾ ಅವರನ್ನು ಮುಲಾಮು ಸಮೇತ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷದ ಒಂದು‌ ಕುಟುಂಬ ನಿರ್ಧರಿಸಿದೆ. ನಾವಿಕನಿಲ್ಲದ ಕಾಂಗ್ರೆಸ್ ದಿಕ್ಕೆಟ್ಟು ನಿಂತಿದೆ ಎಂದು ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next