ಧಾರವಾಡ: ಹಾಸನ ಮತ್ತು ಮಂಡ್ಯ ಎಂಪಿ ಟಿಕೆಟ್ ಹಂಚಿಕೆ ಗೊಂದಲ ಕುರಿತು ಈಗ ಚರ್ಚೆ ನಡೆಯುತ್ತಿದ್ದು,
ಅಗತ್ಯಕ್ಕಿಂತ ಹೆಚ್ಚು ಪ್ರಚಾರ ಅದಕ್ಕೆ ಸಿಗುತ್ತಿದೆ. ಪಕ್ಷದ ಮುಖಂಡರು ಸೇರಿ ಈ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ ಮಾಜಿ ಸಿಎಂ ಕುಮಾರಸ್ವಾಮಿಯವರು ಪ್ರಬುದ್ಧ ರಾಜಕೀಯ ನಾಯಕರು. ನಮ್ಮಲ್ಲಿಯೂ ಯಡಿಯೂರಪ್ಪ ಅವರಂತಹ ಹಿರಿಯರಿದ್ದಾರೆ. ನಾವೆಲ್ಲ ಸೇರಿ ಏನೇ ಸಮಸ್ಯೆಯಿದ್ದರೂ ಇತ್ಯರ್ಥಪಡಿಸುತ್ತೇವೆ.ಸಮಸ್ಯೆಯಾಗದಂತೆ ಬಗೆ ಹರಿಸುತ್ತೇವೆ ಎಂದರು.
ಸಿಎಂ ಸಿದ್ದರಾಮಯ್ಯ ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.ಹಿಂದೂ, ಮಠ, ಮಂದಿರ, ಸನಾತನ ಧರ್ಮ ಮುಗಿಸುತ್ತೇವೆ ಎಂದಿದ್ದರು.ಅವರ ಡಿಎಂಕೆ ಪಾಲುದಾರರು ಹೇಳಿದ್ದರು.ಅವರ ಅನೇಕ ಪಾಟ್ನರ್ ಗಳು ಹೇಳಿಕೆ ಕೊಟ್ಟಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆ ಸಹ ಇದಕ್ಕೆ ಬೆಂಬಲಿಸಿದ್ದರು.ಇದರ ಹಿಂದೆ ವ್ಯವಸ್ಥಿತ ಯೋಜನೆ ಇದಾಗಿದೆ. ಹಿಂದೂ, ಮಠ ಮಂದಿರ ಸಂಪತ್ತು ಕಡಿಮೆ ಮಾಡಲು ಹೊರಟಿದ್ದಾರೆ.ಈ ಮೂಲಕ ಸನಾತನ ಧರ್ಮದ ಶ್ರದ್ಧೆ ಹೆಚ್ಚಾಗದಂತೆ ತಡೆಯಲು ಹೊರಟಿದ್ದಾರೆ. ಸನಾತನ ಧರ್ಮ, ಹಿಂದೂತ್ವ ವಿರೋಧಿಸುವ ತೀರ್ಮಾನದಿಂದ ಇದೆಲ್ಲ ಮಾಡಿದ್ದಾರೆ.ಆದರ ಇದೆಲ್ಲ ನಡೆಯಲು ಬಿಡವುದಿಲ್ಲ.ಇಂದಿರಾ ಗಾಂಧಿಯಂತವರನ್ನೇ ಜನ ಮನೆಗೆ ಕಳುಹಿಸಿದ್ದಾರೆ.ಅವರು ಬಲಾಢ್ಯ ಇದ್ದರೂ ಭಗವಾಧ್ವಜ ಒಂದೀಚು ಜಾಗದಲ್ಲಿ ಹಾರಲು ಬಿಡುವುದಿಲ್ಲ ಎಂದಿದ್ದರು.ಅವರಿಗೆ ಜನ ಬುದ್ಧಿ ಕಲಿಸಿದ್ದರು. ಈಗ ಕಾಂಗ್ರೆಸ್ ಗೂ ಜನ ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.