Advertisement
ಕಾರವಾರದಲ್ಲಿ ಶನಿವಾರ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ಚುನಾವಣೆಯಲ್ಲಿನ ಸೋಲು. ಜೊತೆಗೆ ನಾವು ಗ್ಯಾರಂಟಿ ಮೂಲಕ ಕೋಟಿ ಕೋಟಿ ಜನರನ್ನು ತಲುಪಿದ್ದೇವೆ. ಜನರಿಗೆ ಸರ್ಕಾರದದಿಂದ ಸಣ್ಣ ಸಹಾಯವಾಗುತ್ತಿದೆ. ಇದು ಬಿಜೆಪಿಯವರ ಹೊಟ್ಟೆ ಉರಿಗೆ ಕಾರಣ ಎಂದರು.
Related Articles
Advertisement
ಹೈಕಮಾಂಡ್ ನಮಗೆ ಬಡವರ ಪರವಾಗಿ ಕೆಲಸ ಮಾಡಿ ಎಂದು ಹೇಳಿದೆ, ದುಡ್ಡು ಮಾಡಿ ಎಂದು ಹೇಳಿಲ್ಲ. ನಾವು ಜನರನ್ನು ಲೂಟಿ ಮಾಡುತ್ತಿಲ್ಲ, ಬಡವರ ಪರವಾಗಿ ಕೆಲಸ ಮಾಡುತ್ತಿದ್ದೆವೆ ಎಂದು ಸಚಿವ ವೈದ್ಯ ಹೇಳಿದರು.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಮಂಕಾಳ ವೈದ್ಯರು, ಹೈಕಮಾಂಡ್ ನಮಗೆ 250 ಕೋಟಿ ಕೊಡಿ ಎಂದು ಹೇಳಿಲ್ಲ. ನಮಗೆ ದುಡ್ಡು ಮಾಡಿ ಅಂತಾನೂ ಹೇಳಿಲ್ಲ. ನಾವು ಲೂಟಿ ಮಾಡುತ್ತಿಲ್ಲ. ನಾವು ಬಡವರ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇದಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಾಕ್ಷಿ ಎಂದರು.
ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಟೀಕೆಗಳಿಗೆ ಪ್ರತಿಕ್ರಿಯಿಸದೆ ಇರುವುದು ಒಳ್ಳೆಯದು ಎಂದ ಮಂಕಾಳ ವೈದ್ಯ ಹೇಳಿದರು.
ಕುಮಾರಸ್ವಾಮಿ ಪೆನ್‌ಡ್ರೈವ್ ತೋರಸಿ ಒಂದು ತಿಂಗಳು ಆಗುತ್ತಾ ಬಂತು. ಪೆನ್‌ಡ್ರೈವ್ ಹೊರಗ ಬರಲಿಲ್ಲ ಯಾಕೆ. ಅಂತಹದ್ದು ಏನಾದರೂ ಇದ್ದರೆ ಕುಮಾರಣ್ಣ ಹೊರಗೆ ಹಾಕಲಿ. ಕುಮಾರಣ್ಣ ಹೇಳಿದ ಸಚಿವರು ನಮ್ಮ ಸಂಪುಟದಲ್ಲಿ ಇಲ್ಲ, ಇದ್ದಿದ್ದರೆ ಸಂಪುಟದಿಂದ ಹೊರಗೆ ಹೋಗುತ್ತಾರೆ. ಅಂತಹ ಸಚಿವರನ್ನು ನಮ್ಮ ಪಕ್ಷದಲ್ಲೂ ಇಟ್ಟುಕೊಳ್ಳುವುದಿಲ್ಲ. ಮೊದಲು ಪೆನ್ ಡ್ರೈವ್ ಹೊರಗ ಹಾಕಿ ಎಂದು ಸಚಿವ ಮಂಕಾಳ ವೈದ್ಯ ಸವಾಲು ಹಾಕಿದರು.
ಶಾಸಕ ಭೀಮಣ್ಣ, ಶಾಸಕ ಸೈಲ್ ಜತೆಗಿದ್ದರು.