Advertisement

ಬಿಜೆಪಿ ಜತೆ ಜೆಡಿಎಸ್‌ ವಿಲೀನ ಆಗಲಿದೆ: ಲಕ್ಷ್ಮಣ್‌

03:41 PM Dec 05, 2021 | Team Udayavani |

ಮೈಸೂರು: ತಮಗೆ ಬಂದಿರುವ ಮಾಹಿತಿ ಪ್ರಕಾರ ಜೆಡಿಎಸ್‌ ಪಕ್ಷವು ಬಿಜೆಪಿ ಜೊತೆ ವಿಲೀನವಾಗಲಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಧ್ಯೆ ಮಾತುಕತೆ ನಡೆದಿದೆ ಎಂದು ಕಾಂಗ್ರೆಸ್‌ ಸಮಿತಿ ವಕ್ತಾರ ಎಂ. ಲಕ್ಷ್ಮಣ್‌ ತಿಳಿಸಿದರು.

Advertisement

ರಾಜ್ಯದ ಜಾತ್ಯತೀತ ಜನತಾದಳ ಪಕ್ಷವು ತನ್ನ ನೀತಿ, ನಿಲುವು, ತತ್ವ , ಸಿದ್ದಾಂತಗಳು ಏನೆಂಬುದನ್ನು ಸ್ಪಷ್ಟಪಡಿಸಬೇಕು. ಜೆಡಿಎಸ್‌ ಪಕ್ಷವು ಜಾತ್ಯತೀತವಾದಿಗಳೇ? ಕೋಮುವಾದಿಗಳೇ? ಇದನ್ನು ಅವರೇ ತಿಳಿಸಬೇಕು. ಜೆಡಿಎಸ್‌ ಪಕ್ಷವು ಫ್ಯಾಮಿಲಿ ಟ್ರಸ್ಟ್‌ ಪಕ್ಷವಾಗಿದೆ. ಬಿಜೆಪಿಯ ಬಿ ಟೀಂ ಜೆಡಿಎಸ್‌ ಆಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ಇದನ್ನೂ ಓದಿ:- ಜಗತ್ತಿನ ಎಲ್ಲ ಭಾಷೆಗಳಿಗೆ ಕನ್ನಡವೇ ತಾಯಿ: ಶೆಟ್ಟಿ

ಸಿಂದಗಿ, ಹಾನಗಲ್‌ ಉಪ ಚುನಾವಣೆ ವೇಳೆ ಆರ್‌ಎಸ್‌ಎಸ್‌ ಅನ್ನು ಕಟುವಾಗಿ ಟೀಕಿಸುತ್ತಿದ್ದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಈಗೇಕೆ ಆರ್‌ಎಸ್‌ಎಸ್‌ ಬಗ್ಗೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮತದಾರರಿಗೆ ಬೆಳ್ಳಿ ನಾಣ್ಯದ ಆಮಿಷ ಒಡ್ಡಲಾಗುತ್ತಿದೆ ಎಂದು ಲಕ್ಷ್ಮಣ್‌ ಆರೋಪಿಸಿದರು.

ಈ ಬೆಳ್ಳಿ ನಾಣ್ಯದಲ್ಲಿ ಮಂಜುನಾಥ ಸ್ವಾಮಿ ದೇವರ ಚಿತ್ರವಿದೆ. ಬಿಜೆಪಿ ಅಥವಾ ಜೆಡಿಎಸ್‌ ಯಾವ ಪಕ್ಷದವರು ಹೀಗೆ ಬೆಳ್ಳಿ ನಾಣ್ಯದ ಆಮಿಷವೊಡ್ಡುತ್ತಿದ್ದಾರೆ ಎಂಬುದು ಗೊತ್ತಾಗಿಲ್ಲ. ಈ ಕುರಿತು ಚುನಾವಣಾಧಿಕಾರಿಗಳಿಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಪೊಲೀಸರು ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಲಕ್ಷ್ಮಣ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next