Advertisement
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಪರಸ್ಪರ ಹೊಂದಾಣಿ ಮಾಡಿಕೊಳ್ಳುವ ವಿಷಯವೇನೂ ಹೊಸದಲ್ಲ. ಕರ್ನಾಟಕಕ್ಕೂ ಮೊದಲಲ್ಲ. ಆದರೆ ರಾಜ್ಯದ ಮತದಾರರು ಈ ಮೈತ್ರಿಯಿನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಚುನಾವಣೆ ಫಲಿತಾಂಶ ಹೊರ ಬಿದ್ದಾಗ ತಿಳಿಯಲಿದೆ ಎಂದರು.
Related Articles
Advertisement
ಸಚಿವ ಸ್ಥಾನ ಸಿಗದಿರುವ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ ಬಹಿರಂಗವಾಗಿ ನೋವು ಹೊರ ಹಾಕಬಾರದಿತ್ತು. ಅವರಿಗೆ ನೋವು ಇರವುದು ಸಹಜವೇ ಆದರೂ ಬಹಿರಂಗ ಹೇಳಿಕೆ ಸರಿಯಲ್ಲ. ಏಕೆಂದರೆರ ಈಡಗ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನೀಡಿದಷ್ಟು ಅವಕಾಶವನ್ನು ಬೇರೆ ಯಾವುದೇ ಪಕ್ಷ ನೀಡಿಲ್ಲ ಎಂದರು.
ರಾಜಕೀಯ ಶಕ್ತಿಗಾಗಿ ಶಫರ್ಡ್ಸ್ ಇಂಡಿಯಾ ಇಂಟರನ್ಯಾಶನಲ್ ಸಂಘಟನೆಯನ್ನು 2014 ರಲ್ಲೇ ಹುಟ್ಟುಹಾಕಲಾಗಿದೆ. ನಾನು ಲೋಕಸಭೆ ಸದಸ್ಯನಾಗಿದ್ದಾಗಲೇ ರಾಷ್ಟ್ರ ವಿವಿಧ ರಾಜ್ಯಗಳಲ್ಲಿ ಹರಿದು-ಹಂಚಿಹೋಗಿರುವ ಕುರುಗಾಯಿ ಸಮುದಾಯದ ಸಂಘಟನೆಗಾಗಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ರಾಜಕೀಯ ಕಾರಣಕ್ಕೆ ಈಗ ಹುಟ್ಟುಹಾಕಿದ ಸಂಘಟನೆಯಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯವಾಗಿ ದುರ್ಬಲವಾಗಿರುವ ಕುರಿಗಾಯಿ ಸಮುದಾಯದ ಸಂಘಟನೆಗಾಗಿ ರಾಷ್ಟ್ರ ಮಟ್ಟದಲ್ಲಿ ಸಂಘಟನೆ ಮಾಡುತ್ತ ಬರಲಾಗಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ 8 ಸಮಾವೇಶ ಮಾಡಿದ್ದು, ಇದೀಗ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಆಕ್ಟೋಬರ್ 3 ರಂದು 9ನೇ ರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಶಿಷ್ಟ ಪಂಗಡದ ಸಮುದಾಯದ ಪಟ್ಟಿಗೆ ಸೇರಿಸುವ ಕುರಿತು ಸಮಾವೇಶದಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಚರ್ಚೆ ನಡೆಯಲಿದೆ. ಇಂತ ಸಮಾವೇಶದ ಕುರಿಗಾಯಿ ವೃತ್ತಿಯ ನಮ್ಮ ಸಮುದಾಯವನ್ನು ಸಂಘಟಿಸುವ ಜೊತೆಗೆ ರಾಜಕೀಯ ಜಾಗೃತಿ ಹಾಗೂ ರಾಜಕೀಯ ಶಕ್ತಿ ಪಡೆಯುವ ಉದ್ದೇಶ ಹೊಂದಲಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣ ಹಾಗೂ ರಾಜಕೀಯ ಶಕ್ತಿ ದೊರಕದ ಹೊರತಾಗಿ ಹಿಂದುಳಿದ ಸಮುದಾಯಗಳು ಬಲವರ್ಧನೆ ಆಗಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ರಾಜಕೀಯ ಅಧಿಕಾರ ಹಂಚಿಕೆಯ ಅಗತ್ಯವಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿಯೇ ನಮ್ಮ ಸಂಘಟನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಲಗೊಳಿಸಲು ಯೋಜಿಸಿದ್ದೇವೆ ಎಂದರು.
ರಾಷ್ಟ್ರ ಮಟ್ಟದಲ್ಲಿ ಸುಮಾರು 12 ಕೋಟಿ ಸಮುದಾಯದ ಜನಸಂಖ್ಯೆ ಇರುವ ಕುರುಬ ಸಮುದಾಯ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುತ್ತಿದೆ. ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಸಚಿವರಾಗಿ, ರಾಜ್ಯಪಾಲರಂಥ ಹುದ್ದೆ ಮಾತ್ರ ಅಲಂಕರಿಸಲು ಸಾಧ್ಯವಾಗಿದೆ. ಆದರೆ ಕರ್ನಾಟಕದ ಮೂಲಕ ಸಿದ್ಧರಾಮಯ್ಯ ಅವರು ರಾಷ್ಟ್ರ ಮಟ್ಟದಲ್ಲಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಏಕೈಕ ನಾಯಕ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಅವರಿಗಾಗಿ ಅಭಿನಂದನಾ ಸಮಾರಂಭ ನಡೆಲಿದೆ ಎಂದರು.
ಮಾಜಿ ಸಚಿವರಾದ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಎಂ.ರೇವಣ್ಣ, ರಾಜ್ಯಾಧ್ಯಕ್ಷ ಸಿ.ಎಂ.ನಾಗರಾಜ, ಮಹಿಳಾ ರಾಜ್ಯಾಧ್ಯಕ್ಷೆ ಪ್ರೇಮಲತಾ, ಸೋಮನಾಥ ಕಳ್ಳಿಮನಿ, ರವಿ ಕಿತ್ತೂರ ಸೇರಿದಂತೆ ಇತರರು ಉಪ್ಥಿತರಿದ್ದರು.