Advertisement

ಹಳ್ಳಿಗಳ ಏಳಿಗೆ, ರಾಷ್ಟ್ರೀಯ ವಿಚಾರಗಳಿಂದ ದೇಶ ಅಭಿವೃದ್ಧಿ

02:18 AM Jan 13, 2021 | Team Udayavani |

ಉಡುಪಿ: ಹಳ್ಳಿಗಳ ಏಳಿಗೆ, ರಾಷ್ಟ್ರೀಯ ವಿಚಾರಗಳಿಂದ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮಿಣಾಭಿವೃದ್ಧಿ ಮೂಲಕ ಯೋಜನೆಗಳನ್ನು ಯಶಸ್ವಿಗೊಳಿಸಲು ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದಿರುವ ಮಹಿಳಾ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆಂಬ ವಿಶ್ವಾಸವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಉಡುಪಿಯ ಪುತ್ತೂರು-ಅಂಬಾಗಿಲು ಅಮೃತ್‌ ಗಾರ್ಡನ್‌ ಸಭಾಂಗಣದಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಮಟ್ಟದ ಜನ ಸೇವಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಶೀ, ಮಥುರಾ ದೇಗುಲ ಖಚಿತ :

ಗೆದ್ದ ಮೇಲೆ ಸಾಧನೆಯ ಸವಾಲು ಸ್ವೀಕರಿಸಬೇಕು. ದೇಶದ ಸಂಸ್ಕೃತಿ ಉಳಿಯಬೇಕು, ಆಯೋಧ್ಯೆಯಲ್ಲಿ ರಾಮ ಮಂದಿರನಿರ್ಮಾಣವಾಗಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ರಾಮ ಮಂದಿರ ನಿರ್ಮಾಣದ ಬಳಿಕ ಕಾಶಿಯಲ್ಲಿ ವಿಶ್ವೇಶ್ವರದೇವಸ್ಥಾನ, ಮಥುರಾದಲ್ಲಿ ಶ್ರೀ ಕೃಷ್ಣನದೇವಸ್ಥಾನ ಆಗುವುದು ಖಚಿತ ಎಂದರು.

ಪರಿಶ್ರಮದ ಮೂಲಕ ಅಧಿಕಾರ ಬಳಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಪ್ರಜಾ ಪ್ರಭುತ್ವದಲ್ಲಿ ಜನರ ಪ್ರೀತಿ, ವಿಶ್ವಾಸದಿಂದ ಅಧಿಕಾರ ಬರುತ್ತದೆ. ಪರಿಶ್ರಮದ ಮೂಲಕ ಅದನ್ನು ಬಳಸಿಕೊಳ್ಳಬೇಕು. ಕಾಂಗ್ರೆಸ್‌ ಬಿತ್ತಿದ ಭ್ರಷ್ಟಾಚಾರದ ಬೀಜವನ್ನು ಕಿತ್ತೂಗೆಯಲು ಪ್ರಧಾನಿ ಪಣತೊಟ್ಟಿದ್ದಾರೆ. ಅಧಿಕಾರವನ್ನು ಬಳಸಿಕೊಂಡು ವ್ಯಕ್ತಿತ್ವ ನಿರ್ಮಾಣಮಾಡಬೇಕು. ಜನಸೇವಕದ ಮೂಲಕ ಇದಕ್ಕೆ ಹೊಸ ಅರ್ಥ ಸಿಗಬೇಕು ಎಂದರು.

Advertisement

ಮಾದರಿ ಆಡಳಿತ ನೀಡಿ :

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಊರಿನ ಪ್ರತೀ ಕಾಮಗಾರಿಗಳ ಬಗ್ಗೆ ತಿಳಿದು ಕೊಳ್ಳಲು ಗ್ರಾ.ಪಂ. ಆಡಳಿತದಲ್ಲಿ ಸಾಧ್ಯವಿದೆ. 5 ವರ್ಷದಲ್ಲಿ ಗ್ರಾಮ ಪಂಚಾಯತ್‌ಗಳನ್ನು ಮಾದರಿಯನ್ನಾಗಿಸಬೇಕು. ಜಾತಿ, ಆದಾಯ ಪತ್ರ, ಜನನ-ಮರಣ ಪ್ರಮಾಣ ಪತ್ರಗಳನ್ನು ಗ್ರಾ.ಪಂ.ನಲ್ಲಿಯೇ ನೀಡಲು ಗ್ರಾಮೀಣಾಭಿವೃದ್ಧಿ ಸಚಿವರು ಯೋಜನೆ ರೂಪಿಸುತ್ತಿದ್ದಾರೆ ಎಂದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌, ರಾಜ್ಯಸಭಾ ಸದಸ್ಯರು ಮತ್ತು ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಜಿÇÉಾ ಪ್ರಭಾರಿಗಳಾದ ಉಮಾನಾಥ್‌ ಕೋಟ್ಯಾನ್‌, ಶಾಸಕರಾದ ಕೆ. ರಘುಪತಿ ಭಟ್‌, ಸುನೀಲ್‌ ಕುಮಾರ್‌, ಲಾಲಾಜಿ ಆರ್‌. ಮೆಂಡನ್‌, ಬಿ.ಎಂ. ಸುಕುಮಾರ್‌ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಪ್ರಮುಖರಾದ ಗುರ್ಮೆ ಸುರೇಶ್‌ ಶೆಟ್ಟಿ, ಶಂಕರ ಪೂಜಾರಿ,

ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ಮಂಡಲಗಳ ಅಧ್ಯಕ್ಷರಾದ ಬೈಂದೂರಿನ ದೀಪಕ್‌ ಕುಮಾರ್‌ ಶೆಟ್ಟಿ, ಕುಂದಾಪುರದ ಶಂಕರ್‌ ಅಂಕದಕಟ್ಟೆ, ಉಡುಪಿ ಗ್ರಾಮಾಂತರದ ವೀಣಾ ನಾಯಕ್‌, ಕಾಪುವಿನ ಶ್ರೀಕಾಂತ್‌ ನಾಯಕ್‌, ಕಾರ್ಕಳದ ಮಹಾವೀರ್‌ ಹೆಗ್ಡೆ, ಉಡುಪಿ ನಗರ ಉಪಾಧ್ಯಕ್ಷ ವೆಂಕಟರಮಣ ಕಿದಿಯೂರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಪ್ರಸ್ತಾವನೆಗೈದರು. ಜಿÇÉಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು  ನವೀನ್‌ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್‌ ಶೆಟ್ಟಿ ವಂದಿಸಿದರು.

ಗ್ರಾಮಾಭಿವೃದ್ಧಿ ಚಿಂತನೆಯಿರಲಿ :

ತಮ್ಮ ವ್ಯಾಪ್ತಿಯ ಪ್ರತೀ ಮನೆಯ ಬಗ್ಗೆ, ಗ್ರಾಮದ ಆವಶ್ಯಕತೆಗಳ ಬಗ್ಗೆ ಗ್ರಾ.ಪಂ. ಸದಸ್ಯರು ಚೆನ್ನಾಗಿ ತಿಳಿದುಕೊಂಡಿರುವ ಕಾರಣ ಅಭಿವೃದ್ಧಿ ಕಾರ್ಯಗಳೂ ಮತ್ತಷ್ಟು ಪ್ರಗತಿಯುತವಾಗಿ ನಡೆಯಬೇಕು. ಗ್ರಾ.ಪಂ.ಮಟ್ಟದಲ್ಲಿ ಮಾಡಬಹುದಾದಂತಹ ಅಭಿವೃದ್ಧಿ ಕಾರ್ಯಗಳನ್ನು ಮೊದಲಿಗೆ ಮಾಡಬೇಕು. ದೊಡ್ಡ ಮಟ್ಟದ ಯೋಜನೆಗಳನ್ನು ಮಾಡಲಿಚ್ಛಿಸಿದರೆ ಸ್ಥಳೀಯ ಶಾಸಕರು, ಸಂಸದರ ನೆರವನ್ನು ಪಡೆದುಕೊಳ್ಳಬಹುದು. ಒಟ್ಟಿನಲ್ಲಿ ಗ್ರಾಮಾಭಿವೃದ್ಧಿ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು.

ಜ. 19-26: ಗ್ರಾ.ಪಂ. ಸದಸ್ಯರಿಗೆ ತರಬೇತಿ :

ಉಡುಪಿ: ರಾಜ್ಯದ ಎಲ್ಲ ಗ್ರಾ.ಪಂ. ಸದಸ್ಯರಿಗೆ ಜ. 19ರಿಂದ 26ರ ವರೆಗೆ 285 ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು. ಈ ಸಂದರ್ಭದಲ್ಲಿ ಅವರಿಗೆ ಪ್ರಯಾಣ ಭತ್ತೆ ನೀಡಲಾಗುತ್ತದೆ. ತರಬೇತಿಗೆ 23.5 ಕೋ.ರೂ. ವೆಚ್ಚವಾಗಲಿದ್ದು, ಕೇಂದ್ರ ಸರಕಾರ ಶೇ. 60 ಹಾಗೂ ರಾಜ್ಯ ಶೇ. 40ರಷ್ಟು ಮೊತ್ತವನ್ನು ವಿನಿಯೋಗಿಸಲಿದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜನಸೇವಕ ಸಮಾವೇಶದ ಬಳಿಕ ತಾ.ಪಂ., ಜಿ.ಪಂ. ಚುನಾವಣೆ. ಇದು ಕೂಡ ಕಾರ್ಯಕರ್ತರ ಶಕ್ತಿ ಮೇಲೆ ಗೆಲ್ಲಬೇಕು. ಸಂಘಟನ ಶಕ್ತಿ ಮತ್ತಷ್ಟು ಹೆಚ್ಚಳವಾಗಬೇಕು ಎಂದರು.

ಗ್ರಾಮಾಭಿವೃದ್ಧಿಗೆ ಒತ್ತು :

ಚುನಾವಣೆ ಎಂದರೆ ಬಿಜೆಪಿ ಗೆಲುವು ಎಂಬ ತೀರ್ಮಾನ ಆಗಿದೆ. ಗ್ರಾ.ಪಂ.ಗಳಿಗೆ 1 ಕೋ.ರೂ. ಅನುದಾನ ಬರುತ್ತಿದ್ದು, ಇದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ. ಸ್ವತ್ಛ ಭಾರತ್‌ ಮಿಷನ್‌ ಸಹಿತ ಅಂಗನವಾಡಿಗಳ ದುರಸ್ತಿಗೆ ನೆರವು ಸಿಗಲಿದೆ ಎಂದರು.

ರಾಜಕೀಯ ಪ್ರೇರಿತ ಪ್ರತಿಭಟನೆ :

ರೈತರ ಪ್ರತಿಭಟನೆಯ ಮಧ್ಯೆ ಪಾಕಿಸ್ಥಾನ ಪರ ಘೋಷಣೆ ಕೇಳಿ ಬಂದಿದೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಕೃಷಿ ಮಸೂದೆಗಳನ್ನು ರದ್ದುಗೊಳಿಸಲು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅಲ್ಲಿ ಪಾಕ್‌ ಪರ ಘೋಷಣೆಗಳನ್ನು ಕೂಗುತ್ತಾ ಅಶಾಂತಿ ಉಂಟುಮಾಡುವ ನಗರ ನಕ್ಸಲರು ಇದ್ದಾರೆ. ರಾಷ್ಟ್ರ ವಿರೋಧಿಗಳು ರೈತರ ದಾರಿ ತಪ್ಪಿಸುವುದನ್ನು ತಡೆಯುವಂತೆ ಕೇಂದ್ರ ಮತ್ತು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next