Advertisement

ಜನಸಂಕಲ್ಪ ಯಾತ್ರೆಗೆ ಕ್ಷಣಗಣನೆ: ಮಂಡ್ಯದಲ್ಲಿ ಅಮಿತ್ ಶಾ ಬೃಹತ್ ಸಮಾವೇಶ

01:03 PM Dec 30, 2022 | Team Udayavani |

ಮಂಡ್ಯ: ನಗರದ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುವ ಜನಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.

Advertisement

ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಬಸ್ ಗಳಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಎಲ್ಲರನ್ನು ಬಾಂಬ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿ ಸಮಾವೇಶಕ್ಕೆ ಬಿಡಲಾಗುತ್ತಿದೆ.

ಮಂಡ್ಯ ನಗರ ಸಂಪೂರ್ಣ ಕೇಸರಿಮಯವಾಗಿ ಪರಿಣಮಿಸಿದೆ. ಎಲ್ಲೆಲ್ಲೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ನಾಯಕರ ಫ್ಲೆಕ್ಸ್, ಬ್ಯಾನರ್, ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ.

ಬೆಂಗಳೂರು-ಮೈಸೂರು ಹೆದ್ದಾರಿಯು ಸಂಪೂರ್ಣ ಕೇಸರಿಮಯವಾಗಿದೆ. ಅಲ್ಲದೆ ಸಂಪೂರ್ಣ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಬಾಂಬ್ ನಿಗ್ರಹ ದಳ, ಶ್ವಾನ ದಳಗಳ ನ್ನು ನಿಯೋಜಿಸಲಾಗಿದೆ.

Advertisement

ನಗರದಲ್ಲಿ ನಡೆಯುತ್ತಿರುವ ರೈತರ ಅಹೋರಾತ್ರಿ ಧರಣಿ ಸ್ಥಳದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು, ಅಮಿತ್ ಶಾ ಭೇಟಿಗಾಗಿ ಕಾಯುತ್ತಿದ್ದಾರೆ.

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡುವ ಭರವಸೆ ಬಳಿಕ ಕಪ್ಪುಪಟ್ಟಿ ಪ್ರದರ್ಶನ ಕೈಬಿಟ್ಟಿದ್ದಾರೆ. ಆದರೂ ಪ್ರತಿಭಟನೆ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next