Advertisement

ವಾಪಸ್‌ ಹೋದ ಅನುದಾನ ತರಲು ಬಿಜೆಪಿಗಿಲ್ಲ ಯೋಗ್ಯತೆ:ಶರಣಗೌಡ

06:32 PM Aug 03, 2021 | Team Udayavani |

ಯಾದಗಿರಿ: ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಿ ವಾಪಸ್‌ ಹೋಗಿರುವ ಅನುದಾನ ತರಲು ಯೋಗ್ಯತೆಯಿಲ್ಲ ಎಂದು ಜೆಡಿಎಸ್‌ ಯುವ ನಾಯಕ ಶರಣಗೌಡ ಕಂದಕೂರ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು. ಗುರುಮಠಕಲ್‌ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಮತ್ತು ಕಾರ್ಯಕರ್ತರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

Advertisement

ಕೆಲವರು ಯಾದಗಿರಿಯಲ್ಲಿನ ಗುರುಮಠಕಲ್‌ ಶಾಸಕರ ಜನಸಂಪರ್ಕ ಕಚೇರಿ ಮುಚ್ಚಿ ಎಂದು ಜಿಪಂ ಸಿಇಒಗೆ ದೂರು ನೀಡಿದ್ದಾರೆ. ನಾವು ಶಾಸಕರ ಕಚೇರಿಯಲ್ಲಿ ಕಾಲಹರಣ ಮಾಡುತ್ತಿಲ್ಲ. ಬೆಳಗ್ಗೆಯಿಂದ ರಾತ್ರಿವರೆಗೆ ನಿರಂತರ ಜನರ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿ¨ªೇವೆ. ಕಚೇರಿ ಮುಚ್ಚಿ ಎಂದು ಹೇಳಲು ನೀವು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರುಮಠಕಲ್‌ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ನನ್ನ ಬಗ್ಗೆ ಮಾತನಾಡುವ ವಿರೋಧಿಗಳು ತಾಕತ್ತಿದ್ದರೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧರಾಗಿ ಎಂದು ಸವಾಲು ಹಾಕಿದರು. ಕೊರೊನಾ ಎರಡನೇ ಅಲೆ ಕಡಿಮೆಯಾದ ನಂತರ ನಾನು “ಜೆಡಿಎಸ್‌ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಹಮ್ಮಿಕೊಂಡು 3 ವರ್ಷಗಳ ಕಾಲ ನಾವು ಮಾಡಿದ ಅಭಿವೃದ್ಧಿ ಹಾಗೂ ಮುಂದಿನ 2 ವರ್ಷ ಮಾಡಬೇಕಾದ ಕೆಲಸಗಳ ಬಗ್ಗೆ ಗ್ರಾಮಸ್ಥರಿಂದಲೇ ಸಲಹೆ ಪಡೆಯುವ ಕೆಲಸ ಮಾಡಿದ್ದೇನೆ ಎಂದರು.

ರಾಜ್ಯ ಸರ್ಕಾರ 29 ಸಾವಿರ ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದೆ. ಈ ಸರ್ಕಾರದಿಂದ ಇನ್ನೂ ಗ್ರಾಮೀಣ ಭಾಗದಲ್ಲಿ ಮನೆ ಮಂಜೂರು ಮಾಡಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಮನೆ ಬಂದಲ್ಲಿ ನಾನೇ ಹಳ್ಳಿ ಹಳ್ಳಿಗೆ ಬಂದು ನಿರ್ಗತಿಕರಿಗೆ ಸೂರು ಒದಗಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಮುಖಂಡ ನಿತ್ಯಾನಂದ ಪೂಜಾರಿ ನೇತೃತ್ವದಲ್ಲಿ ಗ್ರಾಪಂ ಸದಸ್ಯರಾದ ಸಾಯಣ್ಣ ಮಡಿವಾಳ, ಸಾಬಣ್ಣ ದಾಯಲ್‌, ಮಹಾದೇವಪ್ಪ ಹಂಕೌರ್‌, ಶಿವರಾಜಪ್ಪ ರೆಡ್ಡೆಮನೊರು, ಗೋಪಾಲ ನಿಂಗಪನೊರು, ಬನ್ನಪ್ಪ ದುಕಖಾನ್‌, ಕತಲಾಪ್ಪ ಅದ್ಲಗತ, ಶ್ರೀಶೈಲಪ್ಪ ವಿಶ್ವಕರ್ಮ, ಕಸ್ತೂರಪ್ಪ ವಿಶ್ವಕರ್ಮ, ಚನ್ನಪ್ಪ ಎಂ, ಹಣಮಂತ ಗುಡಿಗಂಟ್ಲಿ, ಶಾಣಪ್ಪ ದೊರೆ, ಮಲ್ಲಪ್ಪ ದೊರೆ, ಸಾಬಪ್ಪ ಗುಡಿಗಂದ ಇತರರು ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ನಾಯಕ, ನರಸಪ್ಪ ಕವಡೆ, ಅನೀಲ ಹೆಡಗಿಮದ್ರಾ, ಸುಭಾಶ್ಚಂದ್ರ ಕಟಕಟಿ, ರಮೇಶ ಪವಾರ ಬ¨ªೆಪಲ್ಲಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next