Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಯಡಿಯೂರಪ್ಪ ಮುಖ್ಯಮಂತ್ರಿ ಗಳಿದ್ದಾಗ ನಾಗರಾಜ ಶೆಟ್ಟಿ ಮುಜ ರಾಯಿ ಸಚಿವರಿದ್ದಾಗಲೇ ದೇವಸ್ಥಾನ ಗಳ ಅರ್ಚಕರಿಗೆ ಕೊಡುವ ವ್ಯವಸ್ಥೆ ಜಾರಿಗೆ ತಂದರು. ಅಂದಿನ ಕಾಲಕ್ಕೆ 33,500 ದೇವಸ್ಥಾನಗಳಿಗೆ ತಲಾ 6,500 ರೂ.ಗಳನ್ನು ನೀಡಲಾಗುತ್ತಿತ್ತು. ವಿ.ಎಸ್. ಆಚಾರ್ಯ ಇಲಾಖೆ ಸಚಿವರಾದಾಗ ಈ ಮೊತ್ತವನ್ನು 12 ಸಾವಿರ ರೂ.ಗೆ ಹೆಚ್ಚಿಸಿದ್ದರು. ನಾನು ಮಂತ್ರಿಯಾದ ಬಳಿಕ 24 ಸಾವಿರ ರೂ.ಗೆ ಹೆಚ್ಚಿಸಿದ್ದೆ. ಮತ್ತೆ ನಮ್ಮದೇ ಸರಕಾರ ಇದ್ದಾಗ ಇದನ್ನು 48 ಸಾವಿರ ರೂ.ಗೆ ಏರಿಸಲಾಗಿತ್ತು. ಈಗ ಇದು 60 ಸಾವಿರ ರೂ. ಆಗಿದ್ದು, ಕನಿಷ್ಠ 1 ಲಕ್ಷ ರೂ.ಗೆ ಹೆಚ್ಚಿಸಬೇಕೆಂಬುದು ನಮ್ಮ ಬೇಡಿಕೆ ಎಂದರು.
ದೇಗುಲಗಳ ಒಟ್ಟಾರೆ ಆದಾಯದ ಶೇ.5 ಅಥವಾ ಶೇ. 10ರಷ್ಟು ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಪಡೆಯುವುದಕ್ಕೆ ನಮ್ಮ ವಿರೋಧವಿದೆ. ಸರಕಾರ ಜಾರಿ ಗೊಳಿಸಲು ಹೊರಟಿರುವ ಕಾಯ್ದೆ ಯಿಂದ ದೇವಸ್ಥಾನಗಳ ಒಟ್ಟು ಅರ್ಥ ವ್ಯವಸ್ಥೆ ಕುಸಿಯಲಿದೆ ಎಂದರು. 35 ಸಾವಿರ ಅರ್ಚಕರ ಮನೆಗೆ 15 ಕೋಟಿ ರೂ., ಸ್ಕಾಲರ್‌ಶಿಪ್‌ಗೆ 5 ಕೋಟಿ ರೂ., 5 ಕೋಟಿ ರೂ.ಯಲ್ಲಿ ವಿಮೆ ಮಾಡಿಸುವುದಾಗಿ ಹೇಳಿದ್ದಾರೆ. ಕ್ರಿಶ್ಚಿಯನ್ನರು, ಮುಸ್ಲಿಮರಿಗೆ 300 ಕೋಟಿ ರೂ. ಕೊಟ್ಟ ಮೇಲೆ 35 ಸಾವಿರ ದೇವಸ್ಥಾನಗಳಿಗೆ 300 ಕೋಟಿ ರೂ.ಗಳನ್ನಾದರೂ ಕೊಡಬೇಕಿತ್ತು. ಅಲ್ಪಸಂಖ್ಯಾಕರಿಗೆ 10 ಸಾವಿರ ಕೋಟಿ ರೂ. ಘೋಷಿಸಿ, 1 ಸಾವಿರ ಕೋಟಿ ರೂ.ಗೆ ಮಂಜೂರಾತಿಯನ್ನೂ ನೀಡಿರುವ ಸರಕಾರಕ್ಕೆ ಹಿಂದೂ ದೇವಸ್ಥಾನಗಳಿಗೆ 300 ಕೋ. ರೂ. ಕೊಡಲು ಸಾಧ್ಯವಿಲ್ಲವೇ ?
– ಎನ್. ರವಿಕುಮಾರ್, ವಿಧಾನಪರಿಷತ್ ಮುಖ್ಯ ಸಚೇತಕ
Related Articles
Advertisement