Advertisement

ಇಂದಿನಿಂದ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಸಹಾಯವಾಣಿ: ನಳಿನ್ ಕುಮಾರ್

04:16 PM Apr 09, 2020 | keerthan |

ಮಂಗಳೂರು: ಇಂದಿನಿಂದ ರಾಜ್ಯ ಬಿಜೆಪಿ ಸಹಾಯವಾಣಿಯು ಒಂದೇ ಕಡೆಯಲ್ಲಿ ಕೇಂದ್ರ ಬಿಂದುವಾಗಿ ಆರಂಭವಾಗಲಿದೆ. ಈ ಸಹಾಯವಾಣಿ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಕಾರ್ಯ ನಿರ್ವಹಿಸಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಹಾಯವಾಣಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಇಂದಿನಿಂದ ನಮ್ಮ ಸಹಾಯವಾಣಿ ಸಂಖ್ಯೆ ಒಂದೇ ಆಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಯ, ಎಲ್ಲಾ ವಾರ್ಡ್, ಎಲ್ಲಾ ಬೂತ್ ಗಳ ಮತದಾರ, ಕಾರ್ಯಕರ್ತರು 080-68324040 ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಈ ಸಹಾಯವಾಣಿಯಲ್ಲದೆ 8722557733 ವಾಟ್ಸ್ ಆ್ಯಪ್ ಸಂಖ್ಯೆಗೂ ಸಂಪರ್ಕಿಸಬಹುದು  ಜೊತೆಗೆ BJPKARSMIDCELL  ಫೇಸ್ ಬುಕ್ ಮೂಲಕವೂ ಹಾಗೂ ಟ್ವಿಟರ್ ಮೂಲಕವೂ ಸಂಪರ್ಕಿಸಬಹುದು. ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಕರೆದುಹೋಗಲು ವ್ಯವಸ್ಥೆ, ಮೆಡಿಕಲ್, ಆಹಾರ ಸಾಮಾಗ್ರಿಗಳಿಗೆ ವ್ಯವಸ್ಥೆ, ತುರ್ತುಪರಿಸ್ಥಿತಿ ಹೀಗೆ 12 ವಿಷಯಗಳಿಗೆ ಯಾವುದೇ ಕರೆಗಳು ಬಂದಲ್ಲಿ ಎಲ್ಲಿಂದ ಕರೆ ಬಂದಿದೆಯೋ ಅಲ್ಲಿನ ಮಂಡಲ, ವಿಭಾಗಗಳಿಗೆ ತಿಳಿಸಲಾಗುವುದು. ತಕ್ಷಣ ಅಲ್ಲಿನ ಕಾರ್ಯಕರ್ತರು, ಕರೆ ಬಂದವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿ ಕೊಡುತ್ತಾರೆ. ಅಲ್ಲದೆ ಆ ಬಗ್ಗೆ ಫೋಟೋ ತೆಗೆದು ಅಪ್ಡೇಟ್ ಮಾಡಲಾಗುತ್ತದೆ. ಇದರಿಂದ ಯಾವ ದೂರು ಪೂರೈಸಿದೆ ಎಂಬುದರ ಬಗ್ಗೆ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ ಎಂದರು.

ಅಲ್ಲದೆ ಈ ಬಗ್ಗೆ ಪ್ರತೀ ದಿನ ರಾತ್ರಿ ಒಂಬತ್ತು ಗಂಟೆಗೆ ಸಭೆ ಕರೆಸಿ ಅಂದಿನ ದಿನ ಎಷ್ಟು ದೂರು ದಾಖಲಾಗಿವೆ. ಎಷ್ಟು ದೂರಿಗೆ ಪರಿಹಾರ ದೊರಕಿದೆ. ಎಷ್ಟು ದೂರುಗಳು ಬಾಕಿ ಉಳಿದಿವೆ ಎಂದು ಚರ್ಚೆ ನಡೆಸಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.

ಲಾಕ್ ಡೌನ್ ನಿಂದ ಜನರು ಸಂಕಷ್ಟಕ್ಕೆ ಒಳಗಾಗಬಾರದೆಂದು ಅಲ್ಲಲ್ಲಿ ವಾರ್ ರೂಂಗಳನ್ನು ಈಗಾಗಲೇ ತೆರೆಯಲಾಗಿದೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಪ್ರತಿಯೊಬ್ಬ ಕಾರ್ಯಕರ್ತನೂ ಐದು ಜನ ಬಡ, ನಿರ್ಗತಿಕರಿಗೆ ಊಟವನ್ನು ಒದಗಿಸಬೇಕು. ಜೊತೆಗೆ ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ಆಹಾರ ಒದಗಿಸಬೇಕು ಎಂದು ಸೂಚನೆ ನೀಡಿದ್ದರು. ಇಡೀ ರಾಜ್ಯದಲ್ಲಿ ನಿನ್ನೆಯವರೆಗೆ 2,01,398 ಆಹಾರ ಪೊಟ್ಟಣಗಳನ್ನು ಬಡ ಕೂಲಿ ಕಾರ್ಮಿಕರಿಗೆ ಒದಗಿಸಲಾಗಿದೆ. ಒಟ್ಟು 20,13,986 ಮಂದಿಗೆ ಆಹಾರವನ್ನು ಒದಗಿಸಲಾಗಿದೆ. ಅದಲ್ಲದೆ ಈವರೆಗೆ 1,96,150 ಮಾಸ್ಕ್ ಗಳನ್ನು ವಿತರಿಸಲಾಗಿದೆ. ಪ್ರಧಾನಮಂತ್ರಿ ಕೇರ್ಸ್ ನಿಧಿಗೆ ರಾಜ್ಯದಲ್ಲಿ ಈವರೆಗೆ 1,68,031 ಕಾರ್ಯಕರ್ತರು ಇದರಲ್ಲಿ ಪೂರ್ತಿಯಾಗಿ ಭಾಗವಹಿಸಿದ್ದಾರೆ. ಇಷ್ಟರವರೆಗೆ  5,95,705 ಬಡ ಕೂಲಿ ಕಾರ್ಮಿಕರಿಗೆ, ಆಹಾರ ಸಾಮಾಗ್ರಿ ಕಿಟ್ ಗಳನ್ನು ಒದಗಿಸಲಾಗಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next