ಗುವಾಹಟಿ : ಬಿಜೆಪಿ ಎನ್ ಆರ್ ಸಿ ಯನ್ನು ಸಂಪೂರ್ಣವಾಗಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ, ಬಿಜೆಪಿಗೆ ಅದೊಂದು ರಾಜಕೀಯ ಅಸ್ತ್ರವಾಗಿದೆ ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ಧಿ ಸಂಸ್ಥೆಯೊಂದರ ಜೊತೆ ಮಾತನಾಡಿದ ಗೊಗೊಯ್, ಎನ್ ಆರ್ ಸಿ ಮೇಲೆ ನಾವು 800 ಕೋಟಿಯಷ್ಟು ಹಣವನ್ನು ವ್ಯಯ ಮಾಡಿದ್ದೇವೆ. ಎನ್ ಆರ್ ಸಿ ಯ ಬಹುತೇಕ ಎಲ್ಲಾ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಆದರೇ, ಎನ್ ಆರ್ ಸಿ ಯ ಹಿನ್ನಲೆಯನ್ನು ಮುಚ್ಚಲಾಗುತ್ತಿದೆ. ನಾವು ಕೂಡ ಆಡಳಿತವನ್ನು ನಡೆಸಿದ್ದೇವೆ. ಸರ್ಕಾರ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ನಮಗೂ ಗೊತ್ತಿದೆ. ಯಾರು ರಾಜ್ಯದಲ್ಲಿ ಎನ್ ಆರ್ ಸಿ ವಿಚಾರದಲ್ಲಿ ಹೊರಗುಳಿಯಲ್ಪಟ್ಟಿದ್ದಾರೆಯೋ ಅವರಿಗೆ ನಾವು ಕಾನೂನಾತ್ಮಕವಾಗಿ ನೆರವನ್ನು ನೀಡುತ್ತೇವೆ. ಗೋರಖ್ ಮೂಲದ ಹಾಗೂ ಬಂಗಾಳಿ ಜನರಿಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.
ಓದಿ : ರೋಗಗ್ರಸ್ತ ಸಮಾಜದೊಳಗೆ ಎಚ್‌ಐವಿ ಸೋಂಕಿತರು; ನಾಗರಿಕರಾಗಿ ನಮ್ಮ ವೈಯಕ್ತಿಕ ನಿಲುವುಗಳೇನು?
ನಾಗರಿಕರ ಪಟ್ಟಿ ಅಥವಾ ಸಿಟಿಜ್ಹನ್ ಲಿಸ್ಟ್ ಅಸ್ಸಾಂ ನ ಚುನಾವನೆಯಲ್ಲಿ ಪ್ರಮುಖ ವಿಷಯವಾಗಿ ಹೊರಹೊಮ್ಮಿದೆ. ತನ್ನ ಪ್ರಣಾಳಿಕೆಯಲ್ಲಿ, ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ಎನ್ ಆರ್ ಸಿ ಯನ್ನು ಸರಿಪಡಿಸುವ ಮತ್ತು ಸಮನ್ವಯಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅವರು, ಎನ್ ಆರ್ ಸಿ ಯನ್ನು ಬಿಜೆಪಿ ಸಂಪೂರ್ಣವಾಗಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಅವರ ರಾಜಕೀಯ ಧೋರಣೆಗೆ ಸೂಕ್ತವೆನ್ನಿಸಿದಾಗ ಅವರು ಸುಪ್ರೀಂ ಕೋರ್ಟಿನ ತೀರ್ಪಿನ ಪರವಾಗಿದ್ದರು. ತದನಂತರ ನಾವು ಎನ್ ಆರ್ ಸಿ ಯನ್ನು ಸ್ವೀಕರಿಸುವುದಿಲ್ಲ ಎಂದರು. ಈಗ ಬಿಜೆಪಿಯ ಪ್ರಭಾವಿ ಮಂತ್ರಗಳೆಲ್ಲಾ ನಾವು ಎನ್ ಆರ್ ಸಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದೆಷ್ಟು ದುರದೃಷ್ಟಕರ..? ಎಷ್ಟು ಮಂದಿ ಭಾರತೀಯ ಮೂಲದವರು ಹೊರಗುಳಿಯಲ್ಪಟ್ಟಿದ್ದಾರೆ..? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಓದಿ : ಬಂಗಾಳದ ಅಭಿವೃದ್ಧಿಗಾಗಿ ದೀದಿಯನ್ನು ಸೋಲಿಸಿ : ಅಮಿತ್ ಶಾ