Advertisement

ಗ್ರಾಮ ಸ್ಥಳಾಂತರ ಬಿಜೆಪಿ ಸರ್ಕಾರದ ಕೊಡುಗೆ

03:46 PM Mar 21, 2022 | Team Udayavani |

ನರಗುಂದ: 2007, 2009ರಲ್ಲಿ ಉಂಟಾದ ಭೀಕರ ಪ್ರವಾಹ ಸ್ಥಿತಿ ಎದುರಿಸಿದ ಮಲಪ್ರಭೆ ಮತ್ತು ಬೆಣ್ಣಿಹಳ್ಳ ದಂಡೆಯ ಗ್ರಾಮಗಳನ್ನು ಸ್ಥಳಾಂತರಗೊಳಿಸುವಲ್ಲಿ ಬಿಜೆಪಿ ಸರ್ಕಾರದ ಸಾಧನೆ ಬಹುದೊಡ್ಡ ಕೊಡುಗೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.

Advertisement

ಬೂದಿಹಾಳ ನವಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 2021-22ನೇ ಸಾಲಿನ ಎಸ್‌ಸಿಪಿ ಯೋಜನೆಯಡಿ 70 ಲಕ್ಷ ರೂ. ವೆಚ್ಚದಲ್ಲಿ ಎಸ್‌ಸಿ ಕಾಲೋನಿಗೆ ತಡೆಗೋಡೆ ಮತ್ತು ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ನರಗುಂದ ತಾಲೂಕಿನ 3 ಗ್ರಾಮ ಸೇರಿ ಮತಕ್ಷೇತ್ರದ 14 ಗ್ರಾಮಗಳ ಸ್ಥಳಾಂತರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವಧಿ ಯಲ್ಲಿ ಸರ್ಕಾರದ ಕೊಡುಗೆ ಮಹತ್ವದ್ದಾಗಿದೆ. ನವಗ್ರಾಮಕ್ಕೆ ಬಂದರೂ ಬೂದಿಹಾಳ ಗ್ರಾಮಸ್ಥರಿಗೆ ಪ್ರವಾಹ ಬಾ ಧಿಸುತ್ತಲೇ ಇತ್ತು. ಇದೀಗ ಗ್ರಾಮಸ್ಥರಿಗೆ ಭರವಸೆ ನೀಡಿದಂತೆ ನವಗ್ರಾಮಕ್ಕೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಅಭಿವೃದ್ಧಿಗೆ ಒತ್ತು: ಬೂದಿಹಾಳ ಗ್ರಾಮಕ್ಕೆ 1 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. 24 ಲಕ್ಷ ವೆಚ್ಚದಲ್ಲಿ ಸ್ಮಶಾನ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. 36 ಲಕ್ಷ ವೆಚ್ಚದ ಜೆಜೆಎಂ ಯೋಜನೆ, 12 ಲಕ್ಷ ವೆಚ್ಚದಲ್ಲಿ ಶಾಲಾ ದುರಸ್ತಿ ಮಾಡಲಾಗಿದ್ದು, ಇದೀಗ 70 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ, ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿ, 36 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ದಂಡಿನ ಮಾತನಾಡಿ, ಪ್ರವಾಹ ಸಂದರ್ಭದಲ್ಲಿ ತೊಂದರೆ ಎದುರಿಸಿದ ಬೂದಿಹಾಳ ಸ್ಥಳಾಂತರಕ್ಕೆ ಸಚಿವರ ಪರಿಶ್ರಮ ಬಹಳವಿದೆ. ಕೊಣ್ಣೂರ, ಶಿರೋಳ ಮಾರ್ಗದ ಮುಖ್ಯರಸ್ಥೆ 45.5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದು ಪ್ರಗತಿಯಲ್ಲಿದೆ ಎಂದರು.

Advertisement

ಬಿಜೆಪಿ ಮುಖಂಡ ಬಾಬು ಹಿರೇಹೊಳಿ ಮಾತನಾಡಿ, 2020ರ ಅಕ್ಟೋಬರ್‌ನಲ್ಲಿ ಪ್ರವಾಹದಿಂದ ನವಗ್ರಾಮಕ್ಕೆ ಸಾಕಷ್ಟು ತೊಂದರೆಯಾಗಿದ್ದು, ಆಗ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದಂತೆ ಸಚಿವರು ಇಂದು ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಗೋವಿಂದಗೌಡ ಪಾಟೀಲ, ಕೊಣ್ಣೂರ ಗ್ರಾಪಂ ಅಧ್ಯಕ್ಷ ಗೂಳಪ್ಪ ಹುಜರತ್ತಿ, ಸದಸ್ಯರಾದ ಕೊಟ್ರೇಶ ಕೊಟ್ರಶೆಟ್ಟಿ, ಹನಮಂತಗೌಡ ಪಾಟೀಲ, ಕೃಷ್ಣಪ್ಪ ಚವ್ಹಾಣ, ಲಕ್ಷ್ಮವ್ವ ಪೂಜಾರ, ಬಸವರಾಜ ಮಾನೆ, ಸಿದ್ದಪ್ಪ ನರಗುಂದ, ಸಂಗಪ್ಪ ಹಳೇಹೊಳಿ, ಎಂ.ಎಚ್‌. ತಿಮ್ಮನಗೌಡ್ರ, ಬಾಬು ಹಿರೇಹೊಳಿ, ಉಮೇಶಗೌಡ ಪಾಟೀಲ, ಶಂಕರಗೌಡ ಯಲ್ಲಪ್ಪಗೌಡ್ರ, ನಿಂಗಪ್ಪ ಸೋಮಾಪುರ, ಅಜ್ಜಪ್ಪ ಹುಡೇದ ಇದ್ದರು.

ಕೊರೊನಾ ಪ್ರತಿಯೊಬ್ಬ ಮನುಷ್ಯನಿಗೆ ಪಾಠ ಕಲಿಸಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಬಹಳ ಪೆಟ್ಟು ನೀಡಿತು. ಪಕ್ಕದ ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ಅರ್ಧ ವೇತನ ಮಾತ್ರ ನೀಡಿದರೆ ನಮ್ಮ ಸರ್ಕಾರದಲ್ಲಿ ಯಾವುದೇ ನೌಕರರ ವೇತನ ಕಡಿಮೆ ಮಾಡಲಿಲ್ಲ. ನಮ್ಮ ಸರ್ಕಾರ ಕೊರೊನಾ ಸಮರ್ಥವಾಗಿ ಎದುರಿಸಿದೆ.

∙ಸಿ.ಸಿ. ಪಾಟೀಲ, ಲೋಕೋಪಯೋಗಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next