Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಬ್‌ಗಳಲ್ಲಿ ಡ್ರಗ್ಸ್ ಹಾಗೂ ಇತರ ಮಾಫಿಯಾ ನಡೆಯುತ್ತಿದೆ ಎಂದು ನಾನು ಬೊಬ್ಬಿರಿದು ಹೇಳಿ ದರೂ ಸರಕಾರ ಕೇಳಲಿಲ್ಲ. ಅದರ ಫಲ ಈಗ ನಮ್ಮ ಮುಂದಿದೆ. ಪೊಲೀಸರು ಮತ್ತು ರಾಜಕಾರಣಿಗಳೇ ರಾಜ್ಯದ ಡ್ರಗ್ಸ್ ದಂಧೆಗೆ ನೇರ ಕಾರಣ. ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಯುವ ಜನತೆ ಬಗ್ಗೆ ಕಾಳಜಿ ಇದ್ದಲ್ಲಿ ಇದರ ಬಗ್ಗೆ ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದರು.
ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಪುತ್ರ ನಲಪಾಡ್ ಮತ್ತು ವಿದ್ವತ್ ನಡುವೆ ಡ್ರಗ್ಸ್ ವಿಚಾರದಲ್ಲೇ ಗಲಾಟೆ ನಡೆದಿತ್ತು ಎಂದು ಆರೋಪಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ತನಿಖೆಗೆ ಆಗ್ರಹಿಸಿದ್ದರು. ಈಗ ಅವರದ್ದೇ ಬಿಜೆಪಿ ಸರಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಮುಚ್ಚಿ ಹಾಕಿರುವ ನಲಪಾಡ್ ಕೇಸ್ ಅನ್ನು ಮತ್ತೆ ತನಿಖೆ ನಡೆಸಲು ಶೋಭಾ ಆಗ್ರಹಿಸಲಿ ಎಂದು ಮುತಾಲಿಕ್ ಹೇಳಿದರು. ಎಚ್‌ಡಿಕೆಯನ್ನು ತನಿಖೆ ನಡೆಸಿ
ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಲು ಡ್ರಗ್ಸ್ ಹಣವನ್ನು ಬಳಸಲಾಗಿದೆ ಎಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.