ಜೇವರ್ಗಿ: ಪಟ್ಟಣದ ವಾರ್ಡ್ ನಂ. 10ರ ಭವಾನಿ ನಗರದ ಉಪ ಚುನಾವಣೆ ಪ್ರಯುಕ್ತ ಶಾಸಕ ಡಾ| ಅಜಯಸಿಂಗ್ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಶಾಕೀರಾ ಬೇಗಂ ಭೂಸಾರಿ ಪರವಾಗಿ ಪಟ್ಟಣದ ಭವಾನಿ ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ಶಾಸಕ ಡಾ| ಅಜಯಸಿಂಗ್, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದರೂ ಯಾವುದೇ ಅಭಿವೃದ್ಧಿ ಯೋಜನೆಗಳು ಜಾರಿಯಾಗುತ್ತಿಲ್ಲ. ಕೇವಲ ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಬಿಜೆಪಿ ನಾಯಕರು ಅಭಿವೃದ್ಧಿ ಮರೆತಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಆರೋಪಿಸಿದರು.
ಪುರಸಭೆಯಲ್ಲಿ ಬಿಜೆಪಿಯ 17 ಸದಸ್ಯರಿದ್ದರೂ ಪಟ್ಟಣದಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿ ನಡೆದಿಲ್ಲ. ಬಿಜೆಪಿ ಸರ್ಕಾರವಿದ್ದರೂ ಅನುದಾನದ ಕೊರತೆಯಿಂದ ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕಳೆದ ಬಾರಿ ಈ ವಾರ್ಡ್‌ನ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದಂತೆ, ಈ ಬಾರಿಯೂ ಶಾಕೀರಾ ಬೇಗಂ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸೀರಿ, ಷಣ್ಮುಖಪ್ಪಗೌಡ ಹಿರೇಗೌಡ, ರುಕುಂ ಪಟೇಲ ಇಜೇರಿ, ಕಾಶಿಂ ಪಟೇಲ ಮುದಬಾಳ, ಅಬ್ದುಲ್ ರಹೇಮಾನ್ ಪಟೇಲ್, ಶಿವಕುಮಾರ ಕಲ್ಲಾ, ಶಿವರಾಜ ಗುತ್ತೇದಾರ, ರಾಯಪ್ಪ ಬಾರಿಗಿಡ, ಮಹಿಮೂದ್ ನೂರಿ, ಕಾಶಿಂ ಪಟೇಲ ಕುಳಗೇರಿ, ಮಹಿಬೂಬ ಪಟೇಲ ಕೋಬಾಳ, ಸಲಿಂ ಕಣ್ಣಿ, ಅಜ್ಜು ಲಕ್ಷತಿ, ಮಂಜುನಾಥ, ಮರೆಪ್ಪ ಕೋಬಾಳಕರ್, ರುಕುಂ ತೋಲಾಮಿರ್ಚಿ, ಸುನೀಲ ಹಳ್ಳಿ, ರಿಯಾಜ್ ಪಟೇಲ ಮುದಬಾಳ, ನಾಗರಾಜ ಹಾಲಗೂರ, ಮಹೇಶ ಕೋಕಿಲೆ, ವಿಶ್ವರಾಧ್ಯ ಗಂವ್ಹಾರ, ಗುರು ಪಾಟೀಲ, ರಫೀಕ್ ಜಮಾದಾರ, ಜಾನಿಮಿಯಾ, ಗೌಸ್ ಅಡತ್, ವಿ.ಟಿ.ನಾಗರಾಜ, ಗೌತಮ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.