Advertisement
ಇಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂತೋಷ್, ಈಗ ಇಡೀ ಬಿಜೆಪಿ ಕಾರ್ಯಕರ್ತರದ್ದು, ಕೊನೆಯ ಬೆಂಚ್‌ನಲ್ಲಿ ಕುಳಿತವರನ್ನು ಮೊದಲ ಬೆಂಚ್‌ಗೆ ಕರೆತರಲಾಗಿದೆ. ಕೆಲವು ಪಕ್ಷಗಳಲ್ಲಿ ಹಿಂದಿನ ಬೆಂಚ್‌ನಲ್ಲಿರುವವರು ಶಾಶ್ವತವಾಗಿ ಹಿಂದೆಯೇ ಉಳಿಯುತ್ತಾರೆ, ಕೇಸರಿ ಪಕ್ಷವು ತಿದ್ದುಪಡಿ ಮಾಡುವ ಧೈರ್ಯ ಮತ್ತು ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಸಂತೋಷ್ ಹೇಳಿದರು.
Related Articles
Advertisement
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ಮಹತ್ವದ ಬಿಜೆಪಿ ಸಭೆ ನಡೆಸಲಾಗಿದ್ದು,ಸಭೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವ ಗೋವಿಂದ್ ಕಾರಜೋಳ, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಭಾಗಿಯಾಗಿದ್ದರು.
ಯಾವುದೇ ಅರ್ಥ ಕಲ್ಪಿಸೋದು ಬೇಡ
ಸಭೆ ಬಳಿಕ ಮಾತನಾಡಿದ ಸಿ.ಟಿ ರವಿ, ಅಮಿತ್ ಶಾ ಕಾರ್ಯಕ್ರಮ, ನಮ್ಮ ಮುಂದಿನ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ.ಮಾದ್ಯಮಕ್ಕೆ ಹೇಳದಿರುವ ವಿಚಾರವೂ ಬಹಳ ಚರ್ಚೆಯಾಗಿದೆ.ತುಂಬಾ ಜನ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಮುಂದೆ ಚುನಾವಣೆ ಬರಲಿದೆ ಅದರ ಬಗ್ಗೆ ಚರ್ಚೆಯಾಗಿದೆ. ಹಳೆ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗದಿಂದಲೂ ಸೇರ್ಪಡೆಯಾಗಲಿದ್ದಾರೆ ಎಂದರು.
ಮೈಸೂರಿನಲ್ಲಿ ಸಂತೋಷ್ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅವರ ಹೇಳಿಕೆ ರಾಷ್ಟ್ರಕ್ಕೆ ಸೇರಲಿದೆ. ನಮ್ಮ ಪಕ್ಷ ಏನು ಮಾಡಲಿದೆ, ಪ್ರಯೋಗ ಶೀಲತೆ ಬಗ್ಗೆ ಹೇಳಿದ್ದಾರೆ. ಭಾರತದಲ್ಲೇ ಕರ್ನಾಟಕ ಇದೆ, ಎಲ್ಲವೂ ಅದರಲ್ಲಿ ಸೇರಲಿದೆ. ಸಂತೋಷ್ ಅವರ ಹೇಳಿಕೆ ಬಗ್ಗೆ ಯಾವುದೇ ಅರ್ಥ ಕಲ್ಪಿಸೋದು ಬೇಡ. ವ್ಯಕ್ತಿಗತವಾಗಿ ತೆಗೆದುಕೊಳ್ಳೋದು ಬೇಡ. ಯೋಗಿ ಅಂತವರು ಬೆಳಕಿಗೆ ಬಂದಿದ್ದು, ಇಂತ ಪ್ರಯೋಗಶೀಲತೆಯಿಂದಲೇ. ಪಕ್ಷದ ಸಿದ್ಧಾಂತ ಕಾರ್ಯಕರ್ತನಾಗಿ ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು. ಕುಟುಂಬದಿಂದ ಅಲ್ಲ ಅಂತ ಬಾಹ್ಯವಾಗಿ ಹೇಳಿದರು.
ಉತ್ತರಾಖಂಡದಲ್ಲಿ ಸೋತವರನ್ನೂ ಸಿಎಂ ಮಾಡಲಾಗಿದೆ. ಪಕ್ಷ ತೀರ್ಮಾನ ಮಾಡಿದರೆ ಯಾರನ್ನ, ಯಾವ ಸ್ಥಾನಕ್ಕೆ ಬೇಕಾದ್ರೂ ಕೂರಿಸಲಿದೆ ಅಂತ ಬಾಹ್ಯ ಹೇಳಿಕೆ ನೀಡಿದರು. ಯಾವುದು ಆ ಕಾಲಕ್ಕೆ ಸೂಕ್ತ ಅನ್ನಲಿದೆ ಅದನ್ನ ಅಳವಡಿಸಿಕೊಳ್ಳಲಾಗಿದೆ. ಎಷ್ಟೇ ವೈಜ್ಞಾನಿಕವಾಗಿ ಹೇಳಿದರೂ , ಕಾಲ ಕಾಲಕ್ಕೆ ಎಲ್ಲವೂ ಬದಲಾಗಲಿದೆ ಎಂದಿದ್ದಾರೆ.