Advertisement

ಇಂದು ಬಿಜೆಪಿ ಸಂಸ್ಥಾಪನ ದಿನ; ಕಾರ್ಯಕರ್ತರು, ಮುಖಂಡರನ್ನುದ್ದೇಶಿಸಿ ಪ್ರಧಾನಿ ಭಾಷಣ

01:38 AM Apr 06, 2022 | Team Udayavani |

ಹೊಸದಿಲ್ಲಿ: ಆಡಳಿತಾರೂಢ ಬಿಜೆಪಿ ಬುಧವಾರ (ಏ.6)ದಂದು ಸಂಸ್ಥಾಪನ ದಿನ ಆಚರಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿಯವರು ವಚ್ಯುವಲ್‌ ಮೂಲಕ ಬಿಜೆಪಿ ಪದಾಧಿಕಾರಿಗಳು, ಸಂಸದರು, ಸಚಿವರು, ಶಾಸಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಎ.7ರಿಂದ 20ರ ವರೆಗೆ ದೇಶಾದ್ಯಂತ ಸಾಮಾಜಿಕ ನ್ಯಾಯ ನೀಡುವ ಕಾರ್ಯಕ್ರಮವನ್ನೂ ಆಯೋಜಿಸಲಿದೆ ಎಂದೂ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಮನೆ ಮನೆಗೆ ತೆರಳಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಜನಪರ ಮತ್ತು ಸಾಮಾಜಿಕ ನ್ಯಾಯಮುಖಿಯಾಗಿರುವ ಕಾರ್ಯಕ್ರಮಗಳ ವಿವರ ನೀಡಲಿದ್ದಾರೆ. ಜತೆಗೆ ಸಭೆ ಮತ್ತು ಸಮಾರಂಭಗಳನ್ನೂ ಆಯೋಜಿಸಲಾಗಿದೆ ಎಂದು ಅರುಣ್‌ ಸಿಂಗ್‌ ವಿವರಿಸಿದ್ದಾರೆ.

ಇದನ್ನೂ ಓದಿ:ಡಾ| ಪ್ರಭಾಕರ ಭಟ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಸಮಾಲೋಚನೆ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಜೆಪಿಯ ಪ್ರಧಾನ ಕಚೇರಿಯಲ್ಲಿ 13 ರಾಷ್ಟ್ರಗಳ ರಾಯಭಾರಿಗಳ ಜತೆಗೆ ಸಂವಾದ ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ವೊಂದು ಸಂಸ್ಥಾಪನ ದಿನ ಪ್ರಯುಕ್ತ ರಾಯಭಾರಿಗಳ ಜತೆಗೆ ಪಕ್ಷ ಹೊಂದಿರುವ ಸಿದ್ಧಾಂತ, ಕಾರ್ಯಕ್ಷೇತ್ರ ಮತ್ತು ಇತರ ಅಂಶಗಳ ಬಗ್ಗೆ ಮಾಹಿತಿ ನೀಡಲಿದೆ ಎಂದು ಪಕ್ಷದ ಸಾಗರೋತ್ತರ ವ್ಯವಹಾರಗಳ ಕೋಶದ ಮುಖ್ಯಸ್ಥ ವಿಜಯ ಚೌಥಾ ಯ್‌ವಾಲೇ ತಿಳಿಸಿದ್ದಾರೆ.

Advertisement

ಸೇವಾ ಕಾರ್ಯಗಳಲ್ಲಿ ಭಾಗಿಯಾಗಿ: ಬಿಜೆಪಿಯ ಸಂಸದರು ಜನಸೇವಾ ಕಾರ್ಯ ಗಳಲ್ಲಿ ಭಾಗಿಗಳಾಗಬೇಕು ಎಂದು ಪ್ರಧಾನಿ ಸಲಹೆ ಮಾಡಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಎ.7-20ರವರೆಗೆ ಯಾವ ಕಾರ್ಯಕ್ರಮಗಳಲ್ಲಿ ಮುಖಂಡರು ಭಾಗ ವಹಿಸಬೇಕು ಎಂಬು ದನ್ನು ವಿವರಿಸಿದ್ದಾರೆ. ಎ.9ರಂದು ಸಮಾಜ ಸುಧಾರಕ ಜ್ಯೋತಿ ರಾವ್‌ ಫ‌ುಲೆ ಮತ್ತು ಸಂವಿಧಾನಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ್‌ ಜನ್ಮದಿನವನ್ನೂ ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next