Advertisement
ಮುಂದಿನ 10 ವರ್ಷಗಳವರೆಗೆ ‘ಚಾರ್’ ಪ್ರದೇಶದ ‘ಮಿಯಾ’ ಜನರ ಮತಗಳು ಬಿಜೆಪಿಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Related Articles
Advertisement
ಇದು ಸುಧಾರಿಸಲು 10 ವರ್ಷ ತೆಗೆದುಕೊಳ್ಳುತ್ತದೆ:ಚುನಾವಣೆ ಬಂದಾಗ ನಮಗೆ ಮತ ಹಾಕಬೇಡಿ ಎಂದು ನಾನೇ ಮನವಿ ಮಾಡುತ್ತೇನೆ, ಕುಟುಂಬ ಯೋಜನೆ, ಬಾಲ್ಯವಿವಾಹ ನಿಲ್ಲಿಸಿ, ಮೂಲಭೂತವಾದ ಕೈಬಿಟ್ಟಾಗ ಮಾತ್ರ ನಮಗೆ ಮತ ನೀಡಿ, ಇವುಗಳನ್ನು ಈಡೇರಿಸಲು 10 ವರ್ಷ ಬೇಕಾಗಬಹುದು ಅವಾಗ ನಾವೇ ಬಂದು ನಿಮ್ಮ ಬಳಿ ಮತ ಹಾಕಿ ಎಂದು ಕೇಳುತ್ತೇವೆ ಎಂದರು. ಷರತ್ತು ವಿಧಿಸಿದ ನಾಯಕ:
ಬಿಜೆಪಿ ಪರ ಮತ ಹಾಕುವ ಮುಸ್ಲಿಂ ಸಮುದಾಯಕ್ಕೆ ಕೆಲ ಷರತ್ತುಗಳನ್ನು ವಿಧಿಸಿದ್ದು ಅದರಂತೆ ಕುಟುಂಬ ಎರಡ್ಮೂರು ಮಕ್ಕಳನ್ನು ಹೊಂದಿರಬಾರದು, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಬಾಲ್ಯವಿವಾಹ ಮಾಡಬಾರದು, ಮೂಲಭೂತವಾದ ಬಿಟ್ಟು ಸೂಫಿ ಪಂಥವನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ಶಾಲೆ ನಿರ್ಮಿಸುವುದಾಗಿ ಭರವಸೆ :
‘ಚಾರ್’ ಪ್ರದೇಶದಲ್ಲಿ ಮುಖ್ಯವಾಗಿ ಬಂಗಾಳಿ ಮಾತನಾಡುವ ಮುಸ್ಲಿಮರು ವಾಸಿಸುತ್ತಾರೆ. ಈ ಪ್ರದೇಶದಲ್ಲಿ ಶಾಲೆಗಳಿಲ್ಲ ಎಂದು ಸಿಎಂಗೆ ತಿಳಿಸಿದಾಗ, ಅಂತಹ ಪ್ರದೇಶದಲ್ಲಿ ಶಾಲೆಗಳು ಇಲ್ಲದಿರುವ ಬಗ್ಗೆ ಮಾಹಿತಿ ನೀಡಿದರೆ, ತಕ್ಷಣವೇ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. “ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅವಕಾಶ ಸಿಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ, ಮುಂಬರುವ ದಿನಗಳಲ್ಲಿ ನಾವು ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಏಳು ಕಾಲೇಜುಗಳನ್ನು ತೆರೆಯುತ್ತೇವೆ” ಎಂದು ಶರ್ಮಾ ಹೇಳಿದರು. ಇದನ್ನೂ ಓದಿ: Vitla: ಆರ್ಟ್ ಗ್ಯಾಲರಿ ಮಾಲಕ, ಎಲ್.ಐ.ಸಿ. ಏಜೆಂಟ್ ನಾರಾಯಣ ಕುಲಾಲ್ ಆತ್ಮಹತ್ಯೆ