Advertisement
ಬಿಜೆಪಿ ಅಭ್ಯರ್ಥಿಯಾಗಿಯೇ ಕಣಕ್ಕಿಳಿದಿದ್ದ ವೀರಯ್ಯ, ಹೈಕಮಾಂಡ್ ಟಿಕೆಟ್ ತಮಗೆ ನೀಡುತ್ತದೆ ಎಂಬ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು. ಅಲ್ಲದೇ, ಕೋಲಾರದಲ್ಲೇ ಕೆಲವು ತಿಂಗಳ ಹಿಂದೆಯೇ ಮನೆ ಮಾಡಿದ್ದರು.
Related Articles
Advertisement
ಪಕ್ಷದ ಸೂಚನೆಗೆ ಬದ್ಧ: ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 20 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ, 2004 ಮತ್ತು 2014 ರಲ್ಲಿ ಕ್ರಮವಾಗಿ 11800 ಹಾಗೂ 23 ಸಾವಿರ ಮತಗಳಿಂದ ಸೋತಿದ್ದೇನೆ. ಈ ಬಾರಿ ಜನರ ಬೆಂಬಲ ನನಗಿದ್ದು, ಗೆಲ್ಲುವ ಸಂಪೂರ್ಣ ವಿಶ್ವಾಸವಿತ್ತು ಎಂದು ತಿಳಿಸಿದರು.
ಕುತಂತ್ರ ರಾಜಕಾರಣದ ಮೂಲಕ 7 ಬಾರಿ ಗೆದ್ದು ಹೋಗಿರುವ ಮುನಿಯಪ್ಪಗೆ ಈ ಬಾರಿ ಪಾಠ ಕಲಿಸಲು ಕ್ಷೇತ್ರದ ಮತದಾರರು ಸಿದ್ಧವಾಗಿದ್ದರು. ಸುಲಭವಾಗಿ ಗೆಲುವು ಸಾಧಿಸುವ ವಿಶ್ವಾಸದೊಂದಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದು ನಿರಾಸೆಯಾಗಿದೆ ಎಂದು ಕಣ್ಣೀರು ಹಾಕಿದ್ದರು.
ಬಿಜೆಪಿ ಗೆಲುವಿಗೆ ಸಾಕಾರ: ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೆ.ಎಚ್.ಎಂ ಸೋಲಿಸಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಮುನಿಯಪ್ಪ ವಿರೋಧಿ ಅಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರೇ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿವೆ.
ಬಿಜೆಪಿ ಟಿಕೆಟ್ ಪಡೆದಿರುವ ಮುನಿಸ್ವಾಮಿ, ಈಗಾಗಲೇ ಕಾಂಗ್ರೆಸ್ ಭಿನ್ನಮತಿಯ ನಾಯಕರೊಂದಿಗೆ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ. ಪ್ರಚಾರ ತಂತ್ರಗಳ ಕುರಿತು ಅತೃಪ್ತ ಮುಖಂಡರು ಬಿಜೆಪಿ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.