Advertisement

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

12:17 AM Nov 24, 2024 | Team Udayavani |

ದಾವಣಗೆರೆ: ಬಿಜೆಪಿಯಲ್ಲಿರುವ ಹರಕುಬಾಯಿ ನಾಯಕರಿಂದಲೇ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಯಾಗಿದೆ. ನಾಲಿಗೆ ಹರಿಬಿಡುವ ನಾಯಕರಿಗೆ ಕಾಂಗ್ರೆಸ್‌ ವಿರುದ್ಧ ಹೋರಾಟ ಬೇಕಿಲ್ಲ. ಸ್ವಪ್ರತಿಷ್ಠೆಯ ಹೋರಾಟಕ್ಕಿಳಿದಿದ್ದಾರೆ ಎಂದು ಯತ್ನಾಳ್‌ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದೊಳಗಿನ ಇಂಥ ಸ್ವಯಂಘೋಷಿತ ನಾಯಕರೇ 2023ರ ಚುನಾವಣೆ ಸೋಲಿಗೂ ಕಾರಣರಾಗಿದ್ದಾರೆ. ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದರು.

Advertisement

ಇನ್ನಾದರೂ ಬಿಜೆಪಿ ಭಿನ್ನಮತ ಶಮನ ಮಾಡಲಿ: ಸಿ.ಟಿ.ರವಿ
ಕಲಬುರಗಿ: ನಾನು ನಮ್ಮ ನಾಯಕತ್ವ ವಿರುದ್ಧ ಮಾತ ನಾಡಲ್ಲ. ಇನ್ನಾದರೂ ಭಿನ್ನಮತ ಶಮನ ಮಾಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಯಾರು ಎಲ್ಲಿ ಮಾತನಾಡ ಬೇಕು, ಅಲ್ಲಿಯೇ ಮಾತನಾಡ ಬೇಕು. ಹಾದಿಬೀದಿ ಯಲ್ಲಿ ಮಾತನಾಡಿದರೆ ಹೇಗಾಗುತ್ತದೆ? ನಮಗೂ ಸಾಮರ್ಥ್ಯ ಮತ್ತು ದೌರ್ಬಲ್ಯ ಇರುತ್ತದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ಮಕಾಡೆ ಮಲಗಿದೆ. ಅಲ್ಲಿ ಏನೂ ಭವಿಷ್ಯವೇ ಉಳಿದಿಲ್ಲ. ಝಾರ್ಖಂಡ್‌ನ‌ಲ್ಲಿ ಏನೋ ತಪ್ಪಾಗಿದೆ ಎಂದರು.

ಕೊನೇ ಕ್ಷಣದ ಗ್ಯಾರಂಟಿ ಹಣ ಕಾಂಗ್ರೆಸ್‌ ಗೆಲ್ಲಿಸಿದೆ: ರಾಜೀವ್‌

ಬೆಂಗಳೂರು: ತುಷ್ಟೀಕರಣದ ಪರಾಕಾಷ್ಠೆ, ಸಚಿವರ ಮೇಲೆ ಹೇರಿದ ಒತ್ತಡ, ಆಡಳಿತ ಯಂತ್ರದ ಅಲ್ಪ ಮಟ್ಟಿನ ಸಹಕಾರ, ಕೊನೇ ಕ್ಷಣದಲ್ಲಿ ಕೊಟ್ಟ ಗ್ಯಾರಂಟಿಯ ಹಣದಿಂದ ಕಾಂಗ್ರೆಸ್‌ ಪಕ್ಷ ಅಲ್ಪ ಶೇಕಡಾವಾರು ಮತಗಳ ಅಂತರದಿಂದ ಗೆದ್ದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌ ವಿಶ್ಲೇಷಿಸಿದರು. ಸುದ್ದಿಗಾರ ರೊಂ ದಿಗೆ ಮಾತನಾಡಿದ ಅವರು, ಕರ್ನಾಟಕದ 3 ಉಪ ಚುನಾವಣೆಗಳಲ್ಲಿ 3 ಕಡೆಯೂ ಕಾಂಗ್ರೆಸ್‌ ಗೆದ್ದಿದೆ. ಬಿಜೆಪಿ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಅತಿ ಹೆಚ್ಚು ಶ್ರಮ ವಹಿಸಿದ್ದಾರೆ. ಎಲ್ಲ ನಾಯಕರೂ ಪಕ್ಷದ ಚುನಾವಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next