ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿರುವುದು ಪಕ್ಷ ಹಾಗೂ ಸರಕಾರದ ದೃಷ್ಟಿಯಿಂದ ಬಿಜೆಪಿಗೆ ಬಿಗ್ ಡೇ ಯಾಗಿ ಪರಿಣಮಿಸಿದ್ದು, ಖೇಲೋ ಇಂಡಿಯಾ ಕ್ರೀಡಾಕೂಟದ ಜತೆಗೆ ಬಿಜೆಪಿ ರಾಜಕೀಯದ ಆಟಕ್ಕೂ ತೆರೆ ಎಳೆಯಲಿದ್ದಾರೆ.
ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿಗೆ ಆಗಮಿಸುವುದಕ್ಕೆ ಮುನ್ನವೇ ಜೆ.ಪಿ.ನಡ್ಡಾ ನಿವಾಸದಲ್ಲಿ ನಡೆದ ಹೈ ವೋಲ್ಟೇಜ್ ಸಭೆಯಲ್ಲಿ ಅಮಿತ್ ಶಾ ಭಾಗವಹಿಸಿದ್ದರು. ವಿದೇಶ ಪ್ರವಾಸಕ್ಕೆ ತೆರಳುವುದಕ್ಕೆ ಮುನ್ನ ಪ್ರಧಾನಿ ಮೋದಿಯವರ ಜತೆಗೂ ಕರ್ನಾಟಕದ ರಾಜಕಾರಣದ ಬಗ್ಗೆ ಶಾ ಚರ್ಚೆ ನಡೆಸಿದ್ದು, ಅಂತಿಮ ತೀರ್ಮಾನದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ:ಸಚಿವ ಅಶ್ವತ್ಥನಾರಾಯಣ ಪ್ರಕರಣದ ಹಿಂದೆ ಸ್ವಪಕ್ಷೀಯರ ನೆರವು? ಏನಿದು ಗುಸುಗುಸು?
ಸಂಜೆ ಐದಕ್ಕೆ ನಡೆಯುವ ಖೇಲೋ ಇಂಡಿಯಾ ಸಮಾರೋಪಕ್ಕೂ ಮುನ್ನ ಪಕ್ಷದ ಅನೇಕ ಚಟುವಟಿಕೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಕೋರ್ ಕಮಿಟಿ ಸಭೆ ರದ್ದು: ಇಂದು ಸಂಜೆ ನಾಲ್ಕು ಗಂಟೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿತ್ತು. ಆದರೆ ಇದೀಗ ದಿಢೀರ್ ನಿರ್ಧಾರದಲ್ಲಿ ಸಭೆಯನ್ನು ರದ್ದು ಮಾಡಲಾಗಿದೆ. ಶಾಸಕರು, ಪದಾಧಿಕಾರಿಗಳ ಸಭೆಯನ್ನು ಮಧ್ಯಾಹ್ನವೇ ನಡೆಸಲಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಇಂದು ಇಡೀ ದಿನ ಬಿಜೆಪಿಯಲ್ಲಿ ಭಾರಿ ಚಟಿವಟಿಕೆ ನಡೆಯಲಿದೆ.
ಇದನ್ನೂ ಓದಿ:ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದ ಸಭಾಪತಿ ಬಸವರಾಜ್ ಹೊರಟ್ಟಿ