Advertisement

ನಿಷ್ಪಕ್ಷ  ತನಿಖೆಗೆ ಬಿಜೆಪಿ ಸಹಕಾರ: ಮಠಂದೂರು

03:45 AM Jul 11, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಪೊಲೀಸ್‌ ಇಲಾಖೆ ನಿಷ್ಪಕ್ಷವಾಗಿ ಕ್ರಮ ಕೈಗೊಳ್ಳುವಂತಾದರೆ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಗೆ ಬಿಜೆಪಿ ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಹಲ್ಲೆ, ಚೂರಿ ಇರಿತ ಹಾಗೂ ಹತ್ಯೆಗಳ ಹಿಂದೆ ಷಡ್ಯಂತ್ರವಿದೆ. ಈ ಷಡ್ಯಂತ್ರವನ್ನು ಹಾಗೂ ರಾಷ್ಟ್ರ ವಿರೋಧಿ  ಶಕ್ತಿಗಳನ್ನು ಬಯಲಿಗೆಳೆಯುವ ಬಗ್ಗೆ ನಮಗೆ ರಾಜ್ಯ ಗೃಹ ಇಲಾಖೆಯ ಮೇಲೆ ನಂಬಿಕೆ ಇಲ್ಲ. ಇವುಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಏಕೆ ಸಾಧ್ಯವಾಗಿಲ್ಲ?
ಬಂಟ್ವಾಳ ಹಾಗೂ ಸುತ್ತಮುತ್ತಲಿನ ಪ್ರದೇಶ ದಲ್ಲಿ ಕಳೆದ 47 ದಿನಗಳಿಂದ ನಿಷೇಧಾಜ್ಞೆ ಇದ್ದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ ವಾಗ ದಿರುವುದು ದುರದೃಷ್ಟಕರ. ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಮತ್ತು ಮುಖ್ಯ ಮಂತ್ರಿಗಳು ತಮ್ಮ ಜವಾಬ್ದಾರಿ ನಿಭಾಯಿಸಲು ವಿಫಲ ರಾಗಿದ್ದು, ಅವರು ನಿರಂತರವಾಗಿ ಹಿಂದೂ ನಾಯಕರ ವಿರುದ್ಧ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು. 

ಮರಳು ಮಾಫಿಯಾ ಹಾಗೂ ಡ್ರಗ್‌ ಮಾಫಿಯಾಗಳನ್ನು ನಿಯಂತ್ರಿಸದಿರುವುದು, ಜಿಲ್ಲೆ ಯಲ್ಲಿ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಗಳ ಜಾಲ ಹಬ್ಬುತ್ತಿರುವುದು, ಕೇರಳ ದಿಂದ ಬಂದು ಹತ್ಯೆ ಗೈಯುತ್ತಿರುವ ಬಾಡಿಗೆ ಹಂತಕ ರನ್ನು ನಿಯಂತ್ರಿಸದೆ ಇರುವುದು ಹಾಗೂ ಇದಕ್ಕೆಲ್ಲ ಪೂರಕ ವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಪೊಲೀಸ್‌ ವರಿಷ್ಠಾ ಧಿಕಾರಿಯನ್ನು ಬಂಟ್ವಾಳ ಐಬಿಗೆ ಕರೆಸಿಕೊಂಡು ಹಿಂದೂ ನಾಯಕರ ವಿರುದ್ಧ ಸೆಕ್ಷನ್‌ 307 ಕೇಸ್‌ ದಾಖಲಿಸಿ ಬಂಧಿ ಸುವಂತೆ ಸೂಚನೆ ನೀಡಿರುವುದು ಈ ರೀತಿಯ ದುಷ್ಕೃತ್ಯ ಗಳಿಗೆ ಪ್ರೋತ್ಸಾಹ ನೀಡಿ ದಂತಾಗಿದೆ ಎಂದು ಆರೋಪಿಸಿದರು.

ನಿಷೇಧಾಜ್ಞೆಯ ನಡುವೆಯೂ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಹತ್ಯೆ ಹಾಗೂ ರಾಣಿಪುರ ದಲ್ಲಿ ಹಿಂದೂ ಯುವಕನ ಹತ್ಯೆ ಯತ್ನ ನಡೆಸಿರುವ ಆರೋಪಿಗಳನ್ನು ಬಂ ಧಿಸಲು ಪೊಲೀಸರಿಗೆ ಸಾಧ್ಯವಾಗದಿರುವುದು ರಾಜ್ಯ ಗೃಹ ಇಲಾಖೆಯ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.

Advertisement

ಸರಕಾರದ ಕಣ್ಣು ತೆರೆಸುವುದಕ್ಕಾಗಿ ನಿಷೇ ಧಾಜ್ಞೆಯ ನಡುವೆಯೂ ಬಿ.ಸಿ.ರೋಡ್‌ನ‌ಲ್ಲಿ ಸಹಸ್ರಾರು ಹಿಂದೂ ಸಂಘಟನೆಯ ಕಾರ್ಯ ಕರ್ತರು ಒಂದಡೆ ಸೇರಿ ಶಾಂತಿಯುತ ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಬಿಜೆಪಿ ನಾಯಕರಾದ ಕೆ. ಮೋನಪ್ಪ ಭಂಡಾರಿ, ಬಿ. ನಾಗರಾಜ ಶೆಟ್ಟಿ, ಜಿತೇಂದ್ರ ಕೊಟ್ಟಾರಿ, ಕಿಶೋರ್‌ ರೈ, ಡಾ| ವೈ. ಭರತ್‌ ಶೆಟ್ಟಿ, ಸುದರ್ಶನ್‌, ಸಂಜಯ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ರೈ ರಾಜೀನಾಮೆಗೆ ಆಗ್ರಹ
ಕಳೆದ 47 ದಿನಗಳಿಂದಲೂ ಸೆಕ್ಷನ್‌ 144ರ ನಿಷೇದಾಜ್ಞೆ ಜಾರಿಯಲ್ಲಿದ್ದರೂ ಜಿಲ್ಲೆಯಲ್ಲಿ ಪರಿಸ್ಥಿತಿ ಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ ವಾಗದಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ರಾಜೀನಾಮೆ ನೀಡ ಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next