ಬೆಳಗಾವಿ: ಅಂತಿಮ ಸುತ್ತಿನ ಮತ ಎಣಿಕೆಯವರೆಗೂ ರೋಚಕತೆಯಿಂದ ಸಾಗಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಂಸದ ದಿ. ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಜಯ ಸಾಧಿಸಿದ್ದಾರೆ.
ಮಂಗಳಾ ಅಂಗಡಿಯವರು 4048 ಮತಗಳ ಅಂತರದಿಂದ ಕಾಂಗ್ರೆಸ್ ಸ್ಪರ್ಧಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಪಡೆದಿದ್ದಾರೆ.
ಇದನ್ನೂ ಓದಿ:ದುಷ್ಟ ಶಕ್ತಿಗಳ ವಿರುದ್ಧ ಗೆದ್ದ ದುರ್ಗೆ: ಬ್ಯಾನರ್ಜಿಯನ್ನು ಗುಣಗಾನ ಮಾಡಿದ ಕುಮಾರಸ್ವಾಮಿ
ಆರಂಭಿಕ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದ ಮಂಗಳಾ ಅಂಗಡಿ ನಂತರ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರದ ಸುಮಾರು 35 ಸುತ್ತುಗಳಲ್ಲಿ ಸತೀಶ್ ಜಾರಕಿಹೊಳಿ ಅವರು ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 80 ಸುತ್ತಿನ ನಂತರ ಮತ ಅಂತರ ಕಡಿಮೆ ಮಾಡಿಕೊಂಡ ಬಂದ ಮಂಗಳಾ ಅಂತಿಮ ಗೆಲುವಿನ ನಗೆ ಬೀರಿ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:‘ಮೋದಿ-ಶಾ’ರನ್ನೂ ಸೋಲಿಸಬಹುದೆಂದು ದೀದಿ ತೋರಿಸಿಕೊಟ್ಟಿದ್ದಾರೆ : ಸಂಜಯ್ ರಾವತ್