Advertisement

Bengal;ಸಂದೇಶಖಾಲಿಗೆ ಹೋಗುತ್ತಿದ್ದ ಬಿಜೆಪಿ, ಕಾಂಗ್ರೆಸ್ ನಿಯೋಗಕ್ಕೆ ತಡೆ : ಆಕ್ರೋಶ

06:44 PM Feb 16, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್‌ನ ಆಪ್ತ ಸಹಾಯಕರು ಗ್ರಾಮಸ್ಥರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ರಾಜಕೀಯ ಬಿರುಗಾಳಿ ಶುಕ್ರವಾರ ಉಲ್ಬಣಗೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರ ನೇತೃತ್ವದ ಎರಡು ನಿಯೋಗಗಳು ಸ್ಥಳಕ್ಕೆ ಹೋಗದಂತೆ ಶುಕ್ರವಾರದ ಪೊಲೀಸರು ತಡೆದಿದ್ದಾರೆ.

Advertisement

ಕೇಂದ್ರ ಸಚಿವರೊಬ್ಬರು ಮುನ್ನಡೆಸುತ್ತಿದ್ದ ಆರು ಸದಸ್ಯರ ಬಿಜೆಪಿ ನಿಯೋಗವನ್ನು ಗ್ರಾಮಕ್ಕೆ ಹೋಗದಂತೆ ಮೂರನೇ ಬಾರಿ ತಡೆಯಲಾಯಿತು. ಬಿಜೆಪಿ ನಿಯೋಗವು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ತಿಳಿಸಿತು.

ತೃಣಮೂಲ ಕಾಂಗ್ರೆಸ್ ಪ್ರಬಲ ನಾಯಕ ಶೇಖ್ ಷಹಜಹಾನ್ ಅವರ ಆಪ್ತರಿಂದ ಗ್ರಾಮದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನಡೆದಿದೆ ಎಂದು ಬಿಜೆಪಿ ಪದೇ ಪದೇ ಹೇಳಿಕೊಂಡಿದೆ. ಆಡಳಿತ ಪಕ್ಷವು ದೂರುಗಳನ್ನು ದಾಖಲಿಸಲು ಬಿಡುತ್ತಿಲ್ಲ ಎಂದು ಆರೋಪಿಸಿದೆ.

ತೃಣಮೂಲ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ್ದು, ಬಿಜೆಪಿಯು ಸಮಸ್ಯೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಬಂಗಾಳ ಪೊಲೀಸರು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ಪಕ್ಷದ ನಿಯೋಗವನ್ನು ಎರಡು ಬಾರಿ, ಒಮ್ಮೆ ಸರ್ಬೇರಿಯಾದಲ್ಲಿ ಮತ್ತು ನಂತರ ಉತ್ತರ 24 ಪರಗಣ ಜಿಲ್ಲೆಯ ರಾಂಪುರದಲ್ಲಿ ತಡೆಯಲಾಗಿದೆ.

Advertisement

ಹಿರಿಯ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಪ್ರತಿಕ್ರಿಯಿಸಿ”.ಇದಕ್ಕಿಂತ ಅಸಹ್ಯಕರ ಸಂಗತಿ ಇರಲಾರದು..ಮಹಿಳೆಯರೊಂದಿಗೆ ನೀವು ಈ ರೀತಿಯ ಆಟವಾಡುತ್ತಿದ್ದೀರಾ? ನಂಬಲು ಸಾಧ್ಯವಿಲ್ಲ.ನಾವೆಲ್ಲರೂ ರಾಜಕೀಯ ಮಾಡುತ್ತೇವೆ, ಆದರೆ ಇದು ರಾಜಕೀಯಕ್ಕೆ ಮೀರಿದ್ದು. ಹೀಗಾಗಬಾರದು. ದನಿ ಎತ್ತುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಮತ್ತು ಅವರಿಗೆ ಈ ದುಸ್ಥಿತಿ ಬರದಂತೆ ನೋಡಿಕೊಳ್ಳಬೇಕು” ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ಸಂಸದೆ ಹಾಗೂ ಸಂದೇಶಖಾಲಿ ನಿಯೋಗದ ಸದಸ್ಯೆ ಸುನೀತಾ ದುಗ್ಗಲ್ ಎಎನ್ ಐ ಗೆ ಪ್ರತಿಕ್ರಿಯಿಸಿ “ನಾವು ರಾಜ್ಯಪಾಲರನ್ನು ಭೇಟಿಯಾಗಿ ಎಲ್ಲಾ ವಿವರಗಳನ್ನು ನೀಡಿದ್ದೇವೆ. ನಾವು ನೈತಿಕ ಸಮಿತಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೂ ವರದಿಯನ್ನು ಮಂಡಿಸುತ್ತೇವೆ. ರಾಜ್ಯ ಸರ್ಕಾರ ‘ಗುಂಡಾ ರಾಜ್’ ಮಾಡುತ್ತಿದೆ. . ನಮ್ಮೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿದ್ದ ಸಂದೇಶಖಾಲಿಯ ಮಹಿಳೆಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ನಮಗೆ ತಿಳಿದಿದೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next