Advertisement
ಆಡಳಿತರೂಢ ಬಿಜೆಪಿಯ ಐಟಿ ಸೆಲ್‌ನಲ್ಲಿ 65,000 ಸೈಬರ್ ಯೋಧರನ್ನು ಕಾರ್ಯಾಚರಣೆಗೆ ಬಿಡಲಾಗಿದೆ. ಇದೇ ವೇಳೆ ಕಾಂಗ್ರೆಸ್ “ರಾಜೀವ್ ಕಿ ಸಿಪಾಹಿ’ ಹೆಸರಲ್ಲಿ ಐಟಿ ಸೆಲ್ ಸ್ಥಾಪಿಸಿದೆ. ಅದರಲ್ಲಿ 4,000 ಮಂದಿಯ ತಂಡ ಕಾರ್ಯಾಚರಿಸತೊಡಗಿದೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಾಗಿರುವ ಫೇಸ್‌ಬುಕ್, ಟ್ವಿಟರ್ ಹಾಗೂ ವಾಟ್ಸಪ್‌ಗ್ಳ ಮೂಲಕ ಎರಡೂ ಪಕ್ಷಗಳು ಯುವ ಮತದಾರರನ್ನು ಸೆಳೆಯಲು ಯೋಜಿಸಿವೆ. ಇನ್ನೂ 5,000 ಮಂದಿ ಶೀಘ್ರದಲ್ಲೇ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಐಟಿ ಸೆಲ್ ಮುಖ್ಯಸ್ಥ ಶಿವರಾಜ್ ಸಿಂಗ್ ದಬಿ ಹೇಳಿದ್ದಾರೆ.
ಮಧ್ಯಪ್ರದೇಶ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ 230 ಕ್ಷೇತ್ರಗಳ ಪೈಕಿ 55-60 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ನಾಯಕ ನರ್ಮದಾ ಪ್ರಸಾದ್ ಅಹಿರ್ವಾರ್ ಹೇಳಿದ್ದಾರೆ. ಇನ್ನು ಸಮಾಜವಾದಿ ಪಕ್ಷ ಮಧ್ಯಪ್ರದೇಶದಲ್ಲಿ ಅಸ್ತಿತ್ವವನ್ನೇ ಹೊಂದಿಲ್ಲದಿರುವುದರಿಂದ ಅದರ ಜತೆಗೆ ಮೈತ್ರಿ ಅರ್ಥಹೀನ ಎಂದು ಹೇಳಿದ್ದಾರೆ. ಕಾಂಗ್ರೆಸ್ ಜತೆಗೆ ಮೈತ್ರಿ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ ನರ್ಮದಾ ಪ್ರಸಾದ್