ಹಾಸನ: “ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಜೆಡಿಎಸ್ ಮತ್ತು ದೇವೇಗೌಡರ ಕುಟುಂಬವನ್ನು ಮುಗಿಸುವ ಹುನ್ನಾರ ನಡೆದಿದೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
“ಸಿದ್ದರಾಮಯ್ಯ ಒತ್ತಾಯ ಮಾಡಿದ್ದಕ್ಕೆ ಟೆಲಿಫೋನ್ ಕದ್ದಾಲಿಕೆ ಆರೋಪವನ್ನು ಸಿಎಂ ಯಡಿ ಯೂರಪ್ಪ ಸಿಬಿಐ ತನಿಖೆಗೆ ವಹಿಸುವ ನಿರ್ಧಾರ ಮಾಡಿದ ರಂತೆ. ಇದನ್ನು ಯಡಿಯೂರಪ್ಪ ಅವರೇ ಬಹಿರಂಗವಾಗಿ ಹೇಳುತ್ತಾರೆಂದರೆ ಬಿಜೆಪಿ -ಕಾಂಗ್ರೆಸ್ ಎಂತಹ ಹೊಂದಾಣಿಕೆ ರಾಜಕೀಯ ಮಾಡು ತ್ತಿವೆ ಎಂಬುದು ಗೊತ್ತಾಗುವುದಿಲ್ಲವೇ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.
“ಏನೇ ಕುತಂತ್ರ ರಾಜಕಾರಣ ಮಾಡಿ ದರೂ ದೇವೇಗೌಡರ ಕುಟುಂಬವನ್ನು ಹೆದರಿ ಸಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರಿಗೆ ಧೈರ್ಯವಿದ್ದರೆ 2008 ರಿಂದ 2019ರವರೆಗಿನ ಅಂದರೆ ಬಿಜೆಪಿ, ಕಾಂಗ್ರೆಸ್ ಮತ್ತು ಎಚ್.ಡಿ.ಕುಮಾರ ಸ್ವಾಮಿ ಅಧಿಕಾರವಧಿಯ ವರೆಗೂ ಟೆಲಿಪೋನ್ ಕದ್ದಾಲಿಕೆಯ ಬಗ್ಗೆ ಸಿಬಿಐ ತನಿಖೆ ನಡೆಸಲಿ ನೋಡೋಣ’ ಎಂದು ಸವಾಲು ಹಾಕಿದರು.
ಋಣ ಸಂದಾಯ: ಎಚ್.ವಿಶ್ವನಾಥ್‌ಗೆ ನೈತಿಕತೆ ಇಲ್ಲ. ಜೆಡಿಎಸ್‌ನಲ್ಲಿ ರಾಜಕೀಯ ಪುನರ್ಜನ್ಮ ಪಡೆದು ಎಚ್.ಡಿ..ಕುಮಾರಸ್ವಾಮಿಗೆ ದೊಡ್ಡ ಕಾಣಿಕೆ ನೀಡಿ, ಈಗ ತನ್ನ ಅಳಿಯನಿಗೆ ಮುಖ್ಯ ಇಂಜಿನಿಯರ್ ಹುದ್ದೆ ಕೊಟ್ಟಿರುವ ಯಡಿಯೂರಪ್ಪನವರ ಋಣ ತೀರಿಸುತ್ತಿದ್ದಾ ರೆಂದು ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.
ಇದುವರೆಗೂ ನಾನು ಹಾಸನ ಜಿಲ್ಲೆಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿ ಹೋರಾಟ ಮಾಡಿಕೊಂಡು ಬಂದಿದ್ದೆ. ಆದರೆ ಇನ್ನು ಮುಂದೆ ಎಚ್.ಡಿ.ಕುಮಾರಸ್ವಾಮಿ ಭುಜಕ್ಕೆ ನನ್ನ ಭುಜಕೊಟ್ಟು ರಾಜಕೀಯ ವಿರೋಧಿಗಳ ಕುತಂತ್ರವನ್ನು ಮೆಟ್ಟಿ ನಿಲ್ಲುವ ಹೋರಾಟ ನಡೆಸುವೆ.
-ಎಚ್.ಡಿ.ರೇವಣ್ಣ, ಮಾಜಿ ಸಚಿವ