Advertisement

BJP: ತಡೆರಹಿತ ಸಾರಿಗೆ ಸೇವೆಯ ಪ್ರಯಾಣದರ ಹೆಚ್ಚಳಕ್ಕೆ ಬಿಜೆಪಿ ಖಂಡನೆ

09:46 PM Oct 29, 2023 | Team Udayavani |

ಬೆಂಗಳೂರು: ಮೈಸೂರು-ಬೆಂಗಳೂರು ನಡುವಿನ ತಡೆರಹಿತ ಸಾರಿಗೆ ಸೇವೆಯ ಪ್ರಯಾಣದರ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿರುವ ಬಿಜೆಪಿ, ಇನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ಶಕ್ತಿ ಯೋಜನೆಯ ಎಲ್ಲಾ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ ಎಂದಿದೆ.

Advertisement

ಇದಕ್ಕೆ ಟ್ವಿಟ್ಟರ್‌ನಲ್ಲಿ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಮಾತುಗಳು ಅತೃಪ್ತ ಆತ್ಮಗಳ ವ್ಯರ್ಥ ಪ್ರಲಾಪದಂತೆ. ಇಂತಹ ಬಿಜೆಪಿ ಎಂತಹ ಕುಹುಕವಾಡಿದರೂ ನಂಬಲು ರಾಜ್ಯದಲ್ಲಿ ಬಿಜೆಪಿಯವರನ್ನು ಬಿಟ್ಟು ಇನ್ಯಾರೂ ಮೂರ್ಖರಿಲ್ಲ ಎಂದಿದ್ದಾರೆ.

ದರ ಏರಿಕೆ ಖಂಡಿಸಿ ಟ್ವೀಟ್‌ ಮಾಡಿದ್ದ ಬಿಜೆಪಿ, ಜೇಬುಗಳ್ಳರಿ¨ªಾರೆ, ಎಚ್ಚರಿಕೆ ಎಂದು ಬಸ್ಸುಗಳಲ್ಲಿ ಬರೆದಿರುವುದನ್ನು ಕಾಂಗ್ರೆಸ್‌ ಸರ್ಕಾರ ಜೇಬುಗಳ್ಳತನಕ್ಕೆ ಇಳಿದಿದೆ, ಎಚ್ಚರಿಕೆ ಎಂದು ಬದಲಿಸಬೇಕು. ಸಾಮಾನ್ಯ ಬಸ್‌ಗಳ ದರವನ್ನು ನಾಲ್ಕೇ ತಿಂಗಳಲ್ಲಿ ಶೇ.20ರಷ್ಟು ಏರಿಕೆ ಮಾಡಿರುವ ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವುದು ಹಗಲು ದರೋಡೆ. ಮೊದಲು 160 ರೂ.ಗಳಲ್ಲಿ ಮುಗಿಯುತ್ತಿದ್ದ ಪ್ರಯಾಣಕ್ಕೆ ಈಗ 200 ರೂ.ಕ್ಕೆ ಕೈ ಸುಟ್ಟುಕೊಳ್ಳಬೇಕು. ಇನ್ನು ಒಂದೇ ತಿಂಗಳಲ್ಲಿ ಸ್ಥಗಿತಗೊಳ್ಳಲಿರುವ ಶಕ್ತಿ ಯೋಜನೆಯ ಎಲ್ಲಾ ಹೊರೆಯನ್ನೂ ಕರ್ನಾಟಕದ ಜನ ಹೊರಬೇಕಿರುವುದು ನಿಶ್ಚಿತ ಎಂದಿತ್ತು.

ಅದಕ್ಕೆ ಪ್ರತ್ಯುತ್ತರವಾಗಿ ಸಿಎಂ ಕೂಡ ಟ್ವೀಟ್‌ ಮಾಡಿದ್ದು, ಶಕ್ತಿ ಯೋಜನೆ ಇನ್ನೊಂದು ತಿಂಗಳಲ್ಲಿ ಸ್ಥಗಿತಗೊಳ್ಳಲಿದೆ ಎಂದಿರುವ ಬಿಜೆಪಿ ಮಾತು ಅತೃಪ್ತ ಆತ್ಮಗಳ ವ್ಯರ್ಥ ಪ್ರಲಾಪದಂತಿದೆ. 5 ತಿಂಗಳಾದರೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಬಿಜೆಪಿ ಸರ್ಕಾರವನ್ನು ಹೇಗೆ ವಿರೋಧಿಸಬೇಕು, ಟೀಕಿಸಬೇಕು ಎಂದು ತಿಳಿಯದೆ ಅಕ್ಷರಶಃ ಮತಿಭ್ರಮಣೆಯಾದಂತೆ ವರ್ತಿಸುತ್ತಿದೆ ಎಂದು ಪೆಟ್ಟು ನೀಡಿದ್ದಾರೆ.

ಶಕ್ತಿ ಯೋಜನೆ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ಯೋಜನೆಯಾಗಿ ರಾಜ್ಯದ ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ತುಂಬುತ್ತಿದೆ. ಇಂತಹ ಅಪಪ್ರಚಾರಗಳಿಂದ ಬಿಜೆಪಿ ಮುಖಭಂಗ ಅನುಭವಿಸುತ್ತಿದೆಯೇ ಹೊರತು ಸಾಧನೆ ಮಾಡಲಾಗದು.

Advertisement

ಉಚಿತ ಪ್ರಯಾಣದಿಂದ ಸಾರಿಗೆ ನಿಗಮಗಳು ದಿವಾಳಿಯಾಗುತ್ತವೆ ಎಂದಿತ್ತು. ಆದರೆ, ನಿಗಮಗಳಿಗೆ ಹೆಚ್ಚು ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಹೆಚ್ಚಿಸಿ ಸಾರಿಗೆ ನಿಗಮ ಹಾಗೂ ಮಹಿಳೆಯರಿಗೆ ಮತ್ತಷ್ಟು ಶಕ್ತಿ ತುಂಬುತ್ತೇವೆ. ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಶಕ್ತಿ ಬಂದಿದೆ. ದೇವಾಲಯಗಳ ಆದಾಯಕ್ಕೆ ಶಕ್ತಿ ಬಂದಿದೆ. ಇಂತಹ ಯೋಜನೆ ನಿಲ್ಲಲಿದೆ ಎನ್ನುವ ಬಿಜೆಪಿದ್ದು ನನಸಾಗದ ಕನಸು ಮಾತ್ರ.

ನಮ್ಮ ಸರ್ಕಾರ ಸಾರಿಗೆ ನೌಕರರಿಗೆ ಸರಿಯಾದ ಕಾಲಕ್ಕೆ ಸಂಬಳ ನೀಡುತ್ತಿದೆ. ನೌಕರರಿಗೆ ವಿಮೆ ಸೌಲಭ್ಯ ಹೆಚ್ಚಿಸಿದೆ. ನೌಕರರ ಮಕ್ಕಳ ವಿದ್ಯಾಭ್ಯಾಸ ಮತ್ತು ಹೊಸ ಬಸ್‌ಗಳ ಖರೀದಿಗೆ ಯೋಜನೆ ರೂಪಿಸಿದೆ. ಹೊಸ ನೌಕರರ ನೇಮಕಕ್ಕೆ ಮುಂದಾಗಿದ್ದೇವೆ.

ಆದರೆ, ಬಿಜೆಪಿ ಆಡಳಿತದಲ್ಲಿ ಆಗಿದ್ದೇನು? ನೌಕರರಿಗೆ ಸಂಬಳ ನೀಡದ ಕಾರಣ ಪ್ರತಿಭಟನೆ ನಡೆಸಿದ್ದರು. ಪ್ರತಿಭಟಿಸಿದ ನೌಕರರಿಗೆ ವಜಾಗೊಳಿಸುವ ಶಿಕ್ಷೆ ನೀಡಿ ದ್ವೇಷ ಸಾಧಿಸಿತ್ತು ಬಿಜೆಪಿ. ಬಸ್‌ಗಳು ನಿರ್ವಹಣೆ ಇಲ್ಲದೆ, ಗುಜರಿಗೆ ಸೇರಿದ್ದವು. ಸಾರಿಗೆ ನಿಗಮಗಳು ಡೀಸೆಲ್‌ ತುಂಬಿಸಲೂ ಹಣವಿಲ್ಲದೆ ನಷ್ಟದ ಕೂಪಕ್ಕೆ ಬಿದ್ದಿದ್ದವು.

ಇಂತಹ ಕರಾಳ ಇತಿಹಾಸ ಹೊಂದಿದ ಬಿಜೆಪಿ ಇಂದು ಕುಹುಕವಾಡಿದರೆ ನಂಬಲು ರಾಜ್ಯದಲ್ಲಿ ಬಿಜೆಪಿಯವರನ್ನು ಬಿಟ್ಟು ಇನ್ಯಾರೂ ಮೂರ್ಖರಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next