Advertisement

ಜೈರಾಮ್‌ ರಮೇಶ್‌ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

07:10 AM Apr 28, 2018 | Team Udayavani |

ಚಿಕ್ಕಮಗಳೂರು: ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಜೈರಾಮ್‌ ರಮೇಶ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಶಾಸಕ ಸಿ.ಟಿ.ರವಿ ಭ್ರಷ್ಟಾಚಾರ ಮಾಡಿದ್ದಾರೆ.ಭ್ರಷ್ಟಾಚಾರಕ್ಕೆ ಪದಕಗಳನ್ನು ಕೊಡುವುದಿದ್ದರೆ ಕೋಟಿ ರವಿ ಅವರಿಗೇ ಬೆಳ್ಳಿ ಪದಕ ನೀಡಬೇಕೆಂಬ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಹಾಗೂ ವಕೀಲ ಎನ್‌.ದೇವೇಂದ್ರ ಕುಮಾರ್‌ ಜೈನ್‌ ದೂರು ಸಲ್ಲಿಸಿದ್ದಾರೆ. 

Advertisement

ಜೈರಾಮ್‌ ರಮೇಶ್‌ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಡಿ.ಎಲ್‌.ವಿಜಯ್‌ ಕುಮಾರ್‌, ಎಐಸಿಸಿ ಸದಸ್ಯ ಬಿ.ಎಂ.ಸಂದೀಪ್‌, ಕ್ಷೇತ್ರ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ವಕ್ತಾರ ರೂಬಿನ್‌ ಮೋಸೆಸ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು  ದೂರು ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next