ಬೆಂಗಳೂರು: ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರ ಮತವನ್ನು ಅಸಿಂಧುಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.
ರೇವಣ್ಣ ಮತ ಚಲಾಯಿಸುವ ಸಂದರ್ಭದಲ್ಲಿ ತಮ್ಮ ಮತವನ್ನು ಕಾಂಗ್ರೆಸ್ ಚುನಾವಣಾ ಏಜೆಂಟ್ ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿ ಮತ ಹಾಕಿದ್ದಾರೆ. ಇದು ಚುನಾವಣಾ ನಿಯಮದ ಉಲ್ಲಂಘನೆ. ಹೀಗಾಗಿ ಅವರ ಮತ ಅಸಿಂಧುಗೊಳಿಸುವಂತೆ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ.
ಇದನ್ನೂ ಓದಿ:ರಾಜ್ಯಸಭೆ ಚುನಾವಣೆ: ಜೆಡಿಎಸ್ ಶಾಸಕನ ಮನೆಗೆ ಭೇಟಿ ನೀಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಆದರೆ ಈ ಆರೋಪವನ್ನು ರೇವಣ್ಣ ನಿರಾಕರಿಸಿದ್ದಾರೆ. ನಾನು ಡಿಕೆ ಶಿವಕುಮಾರ್ ಗೆ ತೋರಿಸಿ ಮತ ಹಾಕಿಲ್ಲ. ಪುಟ್ಟರಾಜು ಅವರಿಗೆ ತೋರಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಫಲಿತಾಂಶ ವಿಳಂಬ ಸಾಧ್ಯತೆ: ಎಚ್ ಡಿ ರೇವಣ್ಣ ಪ್ರಕರಣದ ಕಾರಣದಿಂದ ರಾಜ್ಯಸಭೆ ಫಲಿತಾಂಶ ವಿಳಂಬವಾಗುವ ಸಾಧ್ಯತೆಯಿದೆ. ಸಂಜೆ 5 ರಿಂದ ಮತಗಳ ಎಣಿಕೆ ಶುರುವಾಗಬೇಕಿತ್ತು. ಆದರೆ ಈಗ ರೇವಣ್ಣ ವಿರುದ್ಧ ಬಿಜೆಪಿ ದೂರು ಕೊಟ್ಟಿದ್ದು, ಈ ದೂರು ಪರಿಶೀಲಿಸಿ ಇತ್ಯರ್ಥ ಪಡಿಸಿದ ಮೇಲೆ ಮತ ಎಣಿಕೆ ಆರಂಭವಾಗಬೇಕಿದೆ. ಈ ಪ್ರಕರಣ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತಂದು ಇತ್ಯರ್ಥ ಪಡಿಸಬೇಕು. ಹೀಗಾಗಿ ಫಲಿತಾಂಶ ರಾತ್ರಿ 10 ರ ಸುಮಾರಿಗೆ ಪ್ರಕಟವಾಗುವ ಸಾಧ್ಯತೆಯಿದೆ.