Advertisement
ಇಲ್ಲಿನ ವಿಠಲರೂಢಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ನಗರಸಭೆ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿಗಳ ಸಭೆಯನ್ನುದ್ದೇಶಿಸಿ ಸಚಿವರು ಮಾತನಾಡಿದರು. ಕಳೆದ ಬಾರಿ ನಮ್ಮ ಸ್ವಲ್ಪ ತಪ್ಪಿನಿಂದ ವಿಧಾನಸಭಾ ಚುನಾವಣೆಯಲ್ಲಿ ಗದಗ ಮತಕ್ಷೇತ್ರ ಬಿಜೆಪಿ ಕೈತಪ್ಪಿದೆ.
Related Articles
Advertisement
ಬಿಜೆಪಿ ಸರಕಾರದಲ್ಲಿ ಮಂಜೂರಾಗಿದ್ದ ತುಂಗಭದ್ರಾ 2ನೇ ಹಂತದ ಕುಡಿಯುವ ನೀರಿನ ಯೋಜನೆ(24*7)ಯನ್ನು ಉದ್ಘಾಟಿಸಿರುವ ಶಾಸಕ ಎಚ್.ಕೆ.ಪಾಟೀಲ, ಯೋಜನೆಯನ್ನು ತಮ್ಮದೆಂದು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಗರದ ಒಳಚರಂಡಿ ಮತ್ತು ರಸ್ತೆಗಳು ಹಾಳಾಗಿದ್ದು, ಕಾಂಗ್ರೆಸ್ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ ಎಂದು ಹೇಳಿದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಕೇವಲ ದುಡ್ಡು, ಜಾತಿಯಿಂದ ಚುನಾವಣೆ ಗೆಲ್ಲುತ್ತೇವೆ ಎಂಬುದು ಭ್ರಮಯಷ್ಟೇ. ಮತದಾರರೊಂದಿಗಿನ ಸ್ನೇಹ, ಬಾಂಧವ್ಯವೇ ಕೈಹಿಡಿಯಲಿದೆ. ಎಲ್ಲ ಅಭ್ಯರ್ಥಿ ಗಳು ಕನಿಷ್ಟ 4-5 ಬಾರಿ ಮತದಾರರ ಮನೆ ಬಾಗಿಲಿಗೆ ತೆರಳಬೇಕು. ತಮ್ಮ ಅಭಿವೃದ್ಧಿಯ ದೃಷ್ಟಿಕೋನ ವಿವರಿಸಿ ಮತ ಪಡೆದುಕೊಳ್ಳಬೇಕು. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದವರಿಗೆ ಹಿರಿಯರು ಮಾರ್ಗದರ್ಶನ ಮಾಡಬೇಕು. ಪಕ್ಷದ ಕಾರ್ಯಕರ್ತರುತಾವೇ ಅಭ್ಯರ್ಥಿ ಎಂದು ಭಾವಿಸಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬಿಜೆಪಿಯು ಮೂರು ಭಾಗಗಳಾಗಿ ಹಂಚಿಹೋಗಿತ್ತು. ಇದರ ಲಾಭ ಪಡೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಏರಿತ್ತು. ಆದರೆ, ಈ ಬಾರಿ ಬಿಜೆಪಿಯ ಎಲ್ಲ ನಾಯಕರು ಒಂದಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ನಡುಕ ಹುಟ್ಟಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರರಾಗಿ ಸ್ಪ ರ್ಧಿಸಿದ್ದ ಶಿವಲೀಲಾ ಓದುಮಠ ಅವರು ಕಣದಿಂದ ಹಿಂದೆ ಸರಿದು, ಬಿಜೆಪಿ ಗೆಲುವಿಗೆ
ಶ್ರಮಿಸುವುದಾಗಿ ಘೋಷಿಸಿದರು. ವೇದಿಕೆ ಮೇಲೆ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ್, ಬಿಜೆಪಿ ಶಹರ ಅಧ್ಯಕ್ಷ ಮಹಾಂತೇಶ್ ನಾಲವಾಡ್, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಸಂಗಮೇಶ್ ದುಂದೂರ, ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರ, ವಿಜಯಲಕ್ಷ್ಮೀ ಮಾನ್ವಿ, ಕಾಂತಿಲಾಲ್ ಬನಸಾಲಿ, ಶಾರದಾ ಹಿರೇಮಠ, ಕಾಂತಿಲಾಲ್ ಬನ್ಸಾಲಿ ಉಪಸ್ಥಿತರಿದ್ದರು. ಅವಳಿ ನಗರದ 35 ವಾರ್ಡ್‌ಗಳಲ್ಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಅವರೆಲ್ಲರೂ ಸ್ಪರ್ಧೆಗೆ ಅರ್ಹರಾಗಿದ್ದರೂ, ಅಳೆದೂ ತೂಗಿ ಟಿಕೆಟ್ ನೀಡಲಾಗಿದೆ. ಆದರೆ, ಪಕ್ಷದ ಟಿಕೆಟ್ ದೊರೆಯದ ಕಾರಣ ಅಸಮಾಧಾನಗೊಂಡು ಕೆಲವೊಬ್ಬರು ಬಂಡಾಯ ಅಭ್ಯರ್ಥಿಗಳಾಗಿದ್ದಾರೆ. ಅವರು ತಮ್ಮ ವಾರ್ಡ್‌ನಲ್ಲಿ ಕಾಂಗ್ರೆಸ್ ಬರಬೇಕೆಂದರೆ, ಸ್ವತಂತ್ರ ಅಭ್ಯರ್ಥಿಯಾಗಿ ಮುಂದುವರಿಯಲಿ. ಬಿಜೆಪಿಗೆ ಗೆಲುವಾಗಲಿ ಎನ್ನುವುದಾದರೆ ನಾಳೆ ನಾಮಪತ್ರ ಹಿಂಪಡೆಯಬೇಕು. ತಮ್ಮಲ್ಲಿರುವ ಭಿನ್ನಮತ, ಅಸಮಾಧಾನ ಬದಿಗೊತ್ತಿ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಸಿ.ಸಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ